ಸಂಹಿತೆ ಜಾರಿಯಾದ್ರೂ ಝಗಮಗಿಸುತ್ತಿರುವ ಫ್ಲೆಕ್ಸ್
ಕ.ಪ್ರ.ವಾರ್ತೆ, ಮೂಡಿಗೆರೆ, ಮಾ.10
ದೇಶದಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಿ ಒಂದು ವಾರ ಕಳೆಯುತ್ತಾ ಬಂದರೂ. ಮೂಡಿಗೆರೆಗೆ ಮಾತ್ರ ನೀತಿ ಸಂಹಿತೆಯ ಬಿಸಿ ತಟ್ಟಿಲ್ಲ. ತಾಲೂಕಿನ ವಿವಿಧಡೆ ರಾರಾಜಿಸುತ್ತಿರುವ ರಾಜಕಿಯ ಪಕ್ಷದ ಕಟೌಟ್ಗಳೇ ಇದಕ್ಕೆ ಸಾಕ್ಷಿಯಾಗಿದೆ.
ಚುನಾವಣಾ ಆಯೋಗದ ಕಾನೂನು- ನಿಯಮಗಳಿಗೆ ಪ್ರತಿಯೊಬ್ಬರೂ ತಲೆ ಬಾಗುತ್ತಾರೆ, ಆದರೆ ಈ ಲೋಕಸಭಾ ಚುನಾವಣೆ ನಿಗದಿಯಾಗಿ ನೀತಿ ಸಂಹಿತೆ ಜಾರಿಯಾಗಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದಿರುವುದು ವಿಪರ್ಯಾಸ.
ಕಡೂರು- ಮಂಗಳೂರು ರಸ್ತೆ ಬದಿಯಲ್ಲಿರುವ ಎಪಿಎಂಸಿ ಯಾರ್ಡ್ ಬಳಿ ರೈತರಿಗೆ ಬಡ್ಡಿರಹಿತ ಸಾಲ ಎಂಬ ಬ್ಯಾನರ್ನಡಿ ಪ್ರಧಾನಿ ಮನಮೋಹನ್ ಸಿಂಗ್, ಸಿಎಂ ಸಿದ್ದರಾಮಯ್ಯ, ಸಚಿವ ಎಚ್.ಎಸ್. ಮಹದೇವ ಪ್ರಸಾದ್, ಆರ್. ರೋಷನ್ಬೇಗ್, .ಅಭಯಚಂದ್ರ ಜೈನ್ ಮೊದಲಾದವರು ಬೃಹತ್ ಫ್ಲೆಕ್ಸ್ ರಾಜಿಸುತ್ತಿದ್ದರೂ, ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.