ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಅಕ್ಷರ ಕಲಿಸುವ ಮೊದಲು ಶಿಕ್ಷಣ ಅರಿವು ಮೂಡಿಸಿ'

Rashmi Kasaragodu
Updated On : 12 Mar 2014, 1:40 am

ತರೀಕೆರೆ:  ಅಕ್ಷರ ಕಲಿಸುವ ಮೊದಲು ಶಿಕ್ಷಣದ ಅರಿವು ಕಲಿಸಬೇಕು ಎಂದು ಶಿವಮೊಗ್ಗ ಕಮಲಾ ನೆಹರು ಕಾಲೇಜಿನ ಕಿರಣ್ ದೇಸಾಯಿ ತಿಳಿಸಿದ್ದಾರೆ.
ಅವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳಾ ವೇದಿಕೆ ವತಿಯಿಂದ ಮಂಗಳವಾರ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿರು.
ಮೌನವೂ ಅಸ್ತ್ರ: ಇಡೀ ಜಗತ್ತಿನ ಮಹಿಳೆಯರ ಸಮಸ್ಯೆ ಒಂದೇ ಆಗಿದೆ, ಮೌನವೇ ಮಹಿಳೆಯರ ಭಾಷೆಯಾಗಿದ್ದು, ಮೌನವೇ ಅನೇಕ ಸಾರಿ ಅಸ್ತ್ರವಾಗುತ್ತದೆ, ಬೀದಿಗಿಳಿದು ಹೋರಾಟ ಮಾಡುವ ಶಕ್ತಿ ಮಹಿಳೆಗಿದೆ. ಜಗತ್ತಿನ ಅರ್ಧ ಭಾಗ ಮಹಿಳೆಯರೇ ಆಗಿದ್ದಾರೆ, ನಾವೇ ಸಬಲೀಕರಣ ಆಗಬೇಕು, ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು, ಹೆಣ್ಣು ಹುಟ್ಟಿದಾಗ ತಾಯಿ ಪ್ರೀತಿಯಿಂದ ಸ್ವಾಗತಿಸಬೇಕು ಎಂದು ತಿಳಿಸಿದ ಅವರು ಮಹಿಳಾ ದಿನಾಚರಣೆ ವರ್ಷಪೂರ್ತಿ ಅಚರಿಸಬೇಕು ಎಂದು ತಿಳಿಸಿದರು.
ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವುದರೊಂದಿಗೆ ಅಂತರಂಗದ ಬೆಳವಣಿಗೆಗೆ ಮಹತ್ವ ನೀಡಬೇಕು, ಆರ್ಥಿಕ ಸಬಲತೆ ಮಹಿಳೆಗೆ ಸ್ವಾತಂತ್ರ್ಯ ತಂದು ಕೊಡುತ್ತದೆ ಎನ್ನುವುದು ಖಂಡಿತ ಸುಳ್ಳು ಎಂದು ತಿಳಿಸಿದ ಅವರು ಮಾನಸಿಕ ಗಟ್ಟಿತನ ಅಗತ್ಯ ಎಂದು ಅವರು ತಿಳಿಸಿದರು.
ಪ್ರಾಚಾರ್ಯ ವಿಶ್ವಮೂರ್ತಿ, ಆರುಂಡಿ ನಾಗರಾಜ್, ಡಾ.ಲತಾ ಕುಮಾರಿ, ಪಂಕಜ, ನಂದಿತ, ಗೀತಾ, ಉಪನ್ಯಾಸಕರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement