ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಂಗ್ರೆಸ್ ಸಾಧನೆ ಜನತೆಗೆ ತಿಳಿಸಿ: ಡಾ. ಮೋಟಮ್ಮ

Rashmi Kasaragodu
Updated On : 12 Mar 2014, 1:41 am

ಮೂಡಿಗೆರೆ: ಕಾಂಗ್ರೆಸ್ ತನ್ನ 129 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಭಾರತವನ್ನು ದಾಸ್ಯ ಮುಕ್ತಗೊಳಿಸಿದ್ದು ಮಾತ್ರವಲ್ಲದೆ, ಸ್ವಾತಂತ್ರ್ಯ ನಂತರ ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ. ಮೋಟಮ್ಮ ತಿಳಿಸಿದರು.
 ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತ್ ವ್ಯಾಪ್ತಿಯ ದರ್ಗಾದಲ್ಲಿ ಭಾರತ್ ನಿರ್ಮಾಣ ಯಾತ್ರ, ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಬಡವ-ಬಲ್ಲಿದರ ನಡುವಿನ ಅಂತರವನ್ನು ಕಡಿಮೆ ಮಾಡಲು, ಜಾತಿ - ಧರ್ಮಗಳ ಕಂದಕವನ್ನು ಮುಚ್ಚಲು ಕಾಂಗ್ರೆಸ್ ಆಡಳಿತ ಅನೇಕ ಕ್ರಾಂತಿಕಾರಕ ಮಸೂದೆಗಳನ್ನು ತರುವ ಮೂಲಕ ಸಮಾನತೆಯ ಕಡೆಗೆ ಹೆಜ್ಜೆ ಹಾಕಿದೆ. ಬೇರೆ ಯಾವ ಪಕ್ಷಗಳು ಮಾಡದ ಅಭಿವೃದ್ಧಿ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ನಡೆಸಿದೆ ಎಂದರು.
ಭಾರತ್ ನಿರ್ಮಾಣ ಯಾತ್ರಾ: ಕಾಂಗ್ರೆಸ್ ಸಿದ್ದಾಂತದ ಬಗ್ಗೆ ಮತ್ತು ಅಭಿವೃದ್ಧಿ ಕಾರ್ಯದ ಬಗ್ಗೆ ಪ್ರತಿ ಗ್ರಾಮೀಣ ಪ್ರದೇಶದ ಜನರಿಗೆ ತಿಳಿಸುವ ಉದ್ದೇಶವೇ ಭಾರತ್ ನಿರ್ಮಾಣ ಯಾತ್ರಾ ಕಾಲ್ನಡಿಗೆ ಜಾಥದ ಮುಖ್ಯ ಉದ್ದೇಶವಾಗಿದೆ. ಕೋಮುವಾದಿ ಶಕ್ತಿಯಿಂದ ದೇಶವನ್ನು ಉಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
 ಪಕ್ಷದ ಜಿಲ್ಲಾಧ್ಯಕ್ಷ ಡಾ.ವಿಜಯ ಕುಮಾರ್, ಕೆಪಿಸಿಸಿ ಸದಸ್ಯ ಜಿ.ಎಚ್.ಹಾಲಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ಮನು, ಬಿಎಸ್.ಜಯರಾಮ್, ಎಂ.ಎನ್. ಅಶ್ವತ್, ಮದೀಶ್, ಸುಶಿಲಾಶೇಖರ್, ಜಿಲ್ಲಾ ಪಂಚಾಯಿತ್ ಸದಸ್ಯರುಗಳಾದ ಜ್ಯೋತಿ ಹೇಮಶೇಖರ್, ಎಂ.ಎಸ್.ಅನಂತು, ತಾಲೂಕ್ ಪಂಚಾಯಿತ್ ಸದಸ್ಯರುಗಳಾದ ಎ.ಜೆ.ಸುಬ್ರಾಯ ಗೌಡ, ಸಬ್ಲಿ ದೇವರಾಜ್, ಯುಎಚ್.ಹೇಮಶೇಖರ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement