ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಡು ಕೋಣದ ಮೃತದೇಹ ಪತ್ತೆ

Rashmi Kasaragodu
Updated On : 12 Mar 2014, 1:40 am

ನರಸಿಂಹರಾಜಪುರ: ಕಮಾಲಾಪುರದ ಯಡಗೆರೆ ಗಣೇಶ್ ಎಂಬುವರ ಅಡಕೆ ತೋಟದ ಪಕ್ಕದ ಗುಡ್ಡದಲ್ಲಿರುವ ಕಾಡು ಕೋಣವೊಂದು ಸತ್ತು ಬಿದ್ದಿರುವುದು ಸೋಮವಾರ ಸಂಜೆ ಪತ್ತೆಯಾಗಿದೆ.
ಮಂಗಳವಾರ ಕೊಪ್ಪ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಯ್ಯ, ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಕೇಶವಮೂರ್ತಿ ಅವರ ಸಮಕ್ಷಮದಲ್ಲಿ ಮಹಜರು ನಡೆಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಡಾ. ರಾಕೇಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಅರಣ್ಯಪಾಲಕ ವರುಣ್ ಉಪಸ್ಥಿತರಿದ್ದರು.



ಶೃಂಗೇರಿ: ವಿವಿಧೆಡೆ ಸಾಧಾರಣ ಮಳೆ


ಶೃಂಗೇರಿ: ತಾಲೂಕಿನ ಕೆಲವೆಡೆ ಮಂಗಳವಾರ ಸಂಜೆಯ ವೇಳೆ ಸಾಧಾರಣ ಮಳೆ ಬಿದ್ದಿದೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಹಲವೆಡೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಬಿದ್ದಿತ್ತು. ಕಳೆದೆರೆಡು ದಿನಗಳಿಂದ ಮಳೆಯಾಗಿರುವುದರಿಂದ ಸುಡು ಬಿಸಿಲ ವಾತಾವರಣಕ್ಕೆ ತಂಪೆರೆಗಿಸಿದಂತಾಗಿದೆ. ನೆಮಛ್ಮಾರು, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಜೆಯ ವೇಳೆಯವರೆಗೂ ತುಂತುರು ಮಳೆ ಮುಂದುವರಿದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement