ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚುನಾವಣಾ ದಿನಾಂಕ ಮುಂದೂಡಲು ಒತ್ತಾಯ

Rashmi Kasaragodu
Updated On : 12 Mar 2014, 2:02 am

ಚಿಕ್ಕಮಗಳೂರು: ರಾಜ್ಯದಲ್ಲಿ ಏ.17ರಂದು ನಡೆಯಲಿರುವ ಲೋಕಸಭೆ ಚುನಾವಣೆ ದಿನಾಂಕವನ್ನು ಬದಲಿಸುವಂತೆ ಒತ್ತಾಯಿಸಿ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘ ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಈ ಸಂಬಂಧ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಕೆ.ಪಿ.ಹೊನಕೇರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಫೆಲಿಕ್ಸ್ ಸಿಕ್ವೇರಾ ಮಾತನಾಡಿ, ಏ.17 ರಿಂದ 20 ರವರೆಗೆ ಗುಡ್‌ಫ್ರೈಡೇ ಅಂಗವಾಗಿ ಕ್ರೈಸ್ತ ಬಾಂಧವರು ಪವಿತ್ರ ವಾರ ಆಚರಣೆ ಮಾಡುತ್ತಾರೆ. ಏ17ರಂದು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಇರುತ್ತದೆ. ಆದ್ದರಿಂದ ಮತದಾನ ಮಾಡಿ ನಮ್ಮ ಹಕ್ಕು ಚಲಾಯಿಸಲು ತೊಂದರೆಯಾಗುತ್ತದೆ ಎಂದು ಹೇಳಿದರು.
ಇದಲ್ಲದೆ ಕ್ರೈಸ್ತ ಸಮುದಾಯದ ಸರ್ಕಾರಿ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ತೆಗೆದು ಕೊಳ್ಳುವುದರಿಂದ ಮತ್ತು ಕ್ರೈಸ್ತರ ಶಾಲೆಗಳನ್ನು ಮತದಾನಕ್ಕೆ ಬಳಸಿಕೊಳ್ಳುವುದರಿಂದ ಅಲ್ಲಿನ ಆಡಳಿತ ಮಂಡಳಿಯವರು ಅಂದು ಮತದಾನ ಮುಗಿಯುವವರೆಗೂ ಪೂರ್ಣ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಧರ್ಮದ ಪ್ರಾರ್ಥನೆ ಸಲ್ಲಿಸಲು ಅಡ್ಡಿ ಉಂಟಾಗುತ್ತದೆ. ಹಾಗಾಗಿ, ಮತದಾನದ ದಿನಾಂಕವನ್ನು ಬದಲಿಸಬೇಕು ಅಥವಾ ಕ್ರೈಸ್ತ ಸಮುದಾಯದ ಸರ್ಕಾರಿ ನೌಕರರಿಗೆ ರಜೆ ನೀಡಬೇಕೆಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಪಿ.ಜಿ.ಫ್ರಾನ್ಸಿಸ್, ಕಾನೂನು ಸಲಹೆಗಾರ ವಿ.ಟಿ.ಥಾಮಸ್, ಉಪಾಧ್ಯಕ್ಷ ಸಿಲ್ವರ್ ಸ್ಟರ್, ನಗರಸಭೆ ಸದಸ್ಯ ರೂಬಿನ್ ಮೊಸಸ್, ಜಾನ್ ಕಣ್ಣನ್, ರೊನಾಲ್ಡ್ ಸೆರವೋ, ಸಿ.ಎಂ. ಜಾರ್ಜ್, ಪೌಲ್, ನವೀನ್ ಪೆರೆರಾ, ಬಾಬು ಡ್ಯಾನಿಯಲ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement