ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರಜಾಪ್ರಭುತ್ವ ಬಲಪಡಿಸಲು ಎಲ್ಲರ ಸಹಕಾರ ಮುಖ್ಯ

Rashmi Kasaragodu
Updated On : 12 Mar 2014, 1:41 am

ಕ.ಪ್ರ.ವಾರ್ತೆ, ಕಡೂರು, ಮಾ.11 ವಿಶ್ವದ ದೊಡ್ಡ ರಾಷ್ಟವಾದ ಭಾರತದ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರ ಕರ್ತವ್ಯ ಪ್ರಜ್ಞೆ ಮೂಡಿಸಿ, ಪ್ರಜಾಪ್ರಭುತ್ವ ಬಲಪಡಿಸಲು ಎಲ್ಲರ ಸಹಕಾರ ಅತಿ ಮುಖ್ಯ ಎಂದು ಕಡೂರು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶಂಕರಪ್ಪ ಹೇಳಿದರು.
ಅವರು ಕಡೂರು ಪಟ್ಟಣದ ಅನ್ನಪೂರ್ಣೇಶ್ವರಿ ಚಿತ್ರಮಂದಿರದಲ್ಲಿ ನಡೆದ ಮತದಾರರ ಪಟ್ಟಿ ಸೇರ್ಪಡೆ ಕುರಿತ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವಕ್ಕೇ ಮಾದರಿ: ವಿವಿಧತೆಯಲ್ಲಿ ಏಕತೆ ಕಾಣುತ್ತಿರುವ ಭಾರತ ದೇಶದ ಪ್ರಜಾಪ್ರಭುತ್ವದ ಆಡಳಿತದಿಂದ ಭಾರತ  ವಿಶ್ವಕ್ಕೇ ಮಾದರಿಯಾಗಿ, ಮತದಾನ ಪ್ರಕ್ರಿಯೆ ಬಗ್ಗೆ ಬೇರೆ ದೇಶಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ. ದೇಶದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರೂ ಮತದಾನದಂತಹ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ಶೇ. 71 ರಷ್ಟು ಮತದಾನವಾಗಿದ್ದು, ಈ ಬಾರಿ ಶೇ. 85ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವಂತೆ ತಾವು ಪ್ರಮುಖ ಪಾತ್ರ ನಿರ್ವಹಿಸಬೇಕು ಎಂದು ಹೇಳಿ, ನೀತಿ ಸಂಹಿತೆ ವಿರುದ್ಧ ಕೆಲಸ ಮಾಡುವ ಯಾವುದೇ ಅಧಿಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಜರಲುಗಲಿದ್ದು ಎಚ್ಚರದಿಂದಿರಬೇಕು ಎಂದರು.
ಮನೆ ಮನೆಗೆ ಭೇಟಿ: ಚುನಾವಣಾ ಜಾಗೃತಿ ಸಮಿತಿ ಅಧ್ಯಕ್ಷ ಸುರೇಂದ್ರ ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗಿರುವ ಹಾಗೂ ಹೊಸದಾಗಿ ಸೇರ್ಪಡೆಯಾಗಬೇಕಿರುವ ಜನರ ಮನೆಗೆ ಭೇಟಿ ನೀಡಿ, ಶೇಕಡವಾರು ಮತದಾನ ಹೆಚ್ಚಳವಾಗುವಂತೆ ಮಾಡಬೇಕು ಎಂದರು.
ತಹಸೀಲ್ದಾರ್ ತಿಮ್ಮಾಭೋವಿ ಮಾತನಾಡಿ, ಮಾ. 16 ರವರೆಗೆ ಮತದಾರರ ಪಟ್ಟಿ ನೋಂದಾವಣಿ ಕಾರ್ಯ ನಡೆಯಲಿದ್ದು, ಫಾರಂ 6ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು. ಫಾರಂ 8ರಲ್ಲಿ ಬಿಟ್ಟುಹೋದ ಮತದಾರರ ಸೇರ್ಪಡೆ ಹಾಗೂ ತಿದ್ದುಪಡಿ ಮಾಡಬೇಕು ಎಂದರು.
ನೋಂದಣಿ ಕಾರ್ಯ ತಾಲೂಕು ವೈದ್ಯಾಧಿಕಾರಿ ಡಾ ಎಸ್.ಕೆ. ಪ್ರಭು ಮಾತನಾಡಿ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಕಾರ್ಯಕರ್ತೆಯರು ಜನರಲ್ಲಿ ಮತದಾರರು ಭಾಗವಹಿಸುವಂತೆ ಗ್ರಾಮಾಂತರ ಪ್ರದೇಶದ ಜನರಲ್ಲಿ ಅರಿವು ಮೂಡಿಸಿ ಮತದಾರರ ನೋಂದಣಿ ಕಾರ್ಯ ಮಾಡಬೇಕು. ಶೇಕಡಾರು ಮತದಾನ ಹೆಚ್ಚಲು ನಿಮ್ಮ ಪಾತ್ರಮುಖ್ಯ ಬುಹಮುಖ್ಯ ಎಂದರು.
ಸಿಡಿಪಿಒ ರಂಗನಾಥ್, ಇ.ಒ. ಮೂಕಪ್ಪಗೌಡ, ಬಿಇಒ ರಂಗನಾಥ್, ಮೋಹನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಕುಮಾರನಾಯ್ಕ, ಕೃಷ್ಣಮೂರ್ತಿ, ಕೈಗಾರಿಕಾ ವಿಸ್ತರಣಾಧಿಕಾರಿ ವೀರೇಶನಾಯ್ಕ, ರೋಟರಿ ಅಧ್ಯಕ್ಷ ಶಿವಾನಂದಯ್ಯ, ರಂಗನಾಥ್ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಡೂರು ಪಟ್ಟಣದಾದ್ಯಂತ ಮತದಾರರನ್ನು ಜಾಗೃತಿಗೊಳಿಸುವ ಮೆರವಣಿಗೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement