ಸಂಘಕ್ಕೆ ಆಯ್ಕೆ
ಶಿವಮೊಗ್ಗ: ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಕಡಿದಾಳ್ ಗೋಪಾಲ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಕೆ.ಜಿ. ಪ್ರಫುಲ್ಲಚಂದ್ರ ಉಪಾಧ್ಯಕ್ಷರಾಗಿ, ಮಂಜುನಾಥ್ ಕಾರ್ಯದರ್ಶಿಯಾಗಿ, ಆದಿಮೂರ್ತಿ ಸಹ ಕಾರ್ಯದರ್ಶಿಯಾಗಿ, ಎನ್.ಎಚ್. ಶ್ರೀಕಾಂತ್ ಖಜಾಂಚಿಯಾಗಿ, ರವಿಕುಮಾರ್ ಲೆಕ್ಕ ಪರಿಶೋಧಕರಾಗಿ ಆಯ್ಕೆ ಆಗಿದ್ದಾರೆ. ನಿರ್ದೇಶಕರಾಗಿ ಪ್ರೊ. ಪದ್ಮನಾಭ್, ಮಾದೇಶ್ ಹೆಗ್ಡೆ, ಎಂ.ಎ. ರಮೇಶ್ ಹೆಗ್ಡೆ, ಕೊರೋಡಿ ಎನ್. ಉಪೇಂದ್ರ, ಉಂಬ್ಳೇಬೈಲ್ ಮೋಹನ್, ಕಡ್ತೂರು ಮೋಹನ್, ಗೋಪಾಲಗೌಡ, ಆಶಿತ್, ಗಣೇಶ್, ನವೀನ್ ಸಾರ್ಚಿದಾ ಸುಂದರೇಶ್, ಡಿ.ಬಿ. ಶಕುಂತಲಾ ವೀರೇಗೌಡ, ವನಮಾಲ ಮೋಹನ್, ಸಹನಾ ಸುಭಾಶ್ ಆಯ್ಕೆಯಾಗಿದ್ದಾರೆ.