ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

15 ದಿನದಿಂದ ಕ್ಷೀರಭಾಗ್ಯವಿಲ್ಲ!

Rashmi Kasaragodu
Updated On : 13 Mar 2014, 11:46 am

ಕ.ಪ್ರ.ವಾರ್ತೆ, ಮೂಡಿಗೆರೆ, ಮಾ.12
ಸರ್ಕಾರ ಮಕ್ಕಳ ಆರೋಗ್ಯದ ದೃಷ್ಟಿಯಿಂದ “PÐÞÁÚºÛVÚÀ’ ಯೋಜನೆ ಜಾರಿಗೆ ತಂದಿದೆ. ಆದರೆ, ತಾಲೂಕಿನ ಬಣಕಲ್ ಹೋಬಳಿಯ ಹಳೇಹಳ್ಳಿ ಶಾಲೆಯ ಮಕ್ಕಳಿಗೆ ಮಾತ್ರ ಕಳೆದ 15 ದಿನಗಳಿಂದ “PÐÞÁÚºÛVÚÀ’ÉÄÇ¥æ ವಂಚಿತರಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕು ಪಂಚಾಯಿತಿ ಸದಸ್ಯ ಸಬ್ಲೀ ದೇವರಾಜ್ ಬುಧವಾರ ಬಣಕಲ್ ಹೋಬಳಿಯ ಹಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಭೇಟಿ ನೀಡಿದಾಗ, ಮುಖ್ಯೋಪಾಧ್ಯಾಯರು ನಾಪತ್ತೆಯಾಗಿದ್ದರು. ನಂತರ ಶಾಲಾ ಶಿಕ್ಷಕರನ್ನು ಶಾಲೆಯ ಅಕ್ಷರ ದಾಸೋಹದ ಬಗ್ಗೆ ವಿಚಾರಿಸಿದಾಗ ಮಧ್ಯಾಹ್ನದ ಬಿಸಿಯೂಟದಲ್ಲಿ ಯಾವುದೇ ಅಡಚಣೆಗಳಿಲ್ಲದೆ ನಡೆಯುತ್ತಿದೆ. ಆದರೆ, ಮುಖ್ಯ ಶಿಕ್ಷಕರು “PÐÞÁÚºÛVÚÀ’ ಯೋಜನೆಗೆ ಇಂಡೆಂಟ್ ಹಾಕದೇ ಇರುವುದರಿಂದ ಕಳೆದ 15 ದಿನಗಳಿಂದ “PÐÞÁÚºÛVÚÀ’¦M¥Ú ವಂಚಿತರಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ತರಾಟೆ:  ಇದರಿಂದ ಕುಪಿತಗೊಂಡ ಸದಸ್ಯ ದೇವರಾಜು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಬಡ ಮಕ್ಕಳ ಶಾಲೆ ಎಂದರೆ ಎಷ್ಟು ಅಸಡ್ಡೆ. ಅದೇ ನಿಮ್ಮ ಮಕ್ಕಳಾಗಿದ್ದರೆ ಹೀಗೆ ಬಿಡುತ್ತಿದ್ದೀರಾ? ಶಾಲೆಯಲ್ಲಿ ಓದುವ ಮಕ್ಕಳು ನಿಮ್ಮ ಮಕ್ಕಳಂತೆ ನೋಡಿಕೊಳ್ಳುವುದು ಬಿಟ್ಟು ತಾರತಮ್ಯ ಮಾಡುವುದು ಎಷ್ಟು ಸರಿ ಎಂದರು.
ಮುಖ್ಯೋಪಾಧ್ಯಾಯರು ಎಲ್ಲಿ ಎಂದು ಕೇಳಿದರೆ ಸಮರ್ಪಕ ಉತ್ತರವಿಲ್ಲದೆ, ಹಾರಿಕೆಯ ಉತ್ತರವನ್ನು ಕಂಡು ತಕ್ಷಣವೇ ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ, ಹೇಮಾ ಶೇಖರ್, ತಾಪಂ ಅಧ್ಯಕ್ಷರ ಗಮನಕ್ಕೆ ತಂದರು.
ಮುಖ್ಯಶಿಕ್ಷಕರ ಬೇಜಾವಾಬ್ದಾರಿತನದಿಂದ ಸರ್ಕಾರದ “PÐÞÁÚºÛVÚÀ’¦M¥Ú ಮಕ್ಕಳು ವಂಚಿತರಾಗಿದ್ದಾರೆ. ಮುಖ್ಯ ಶಿಕ್ಷಕರ ಮೇಲೆ ಕ್ರಮ ಜರುಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತರುವುದಾಗಿ ಪತ್ರಕರ್ತರಿಗೆ ತಿಳಿಸಿದರು.
ನಂತರ ಅದೇ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ 11 ವಿದ್ಯಾರ್ಥಿಗಳಲ್ಲಿ ಕೇವಲ 4 ಮಂದಿ ವಿದ್ಯಾರ್ಥಿಗಳಿಗೆ ಪರಿಸರ ಮಾಲಿನ್ಯದ ಬಗ್ಗೆ ಪುಸ್ತಕಗಳು ವಿತರಣೆಯಾಗಿವೆ. ಇದರ ಬಗ್ಗೆಯೂ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಬಿಸಊಿಟ ಸಿಬ್ಬಂಧಿಗಳು ತಲೆಗೆ ಬಟ್ಟೆ ಸುತ್ತಿಕೊಂಡು ಕೈಗೆ ಗ್ಲೌಸ್ ಹಾಕಿಕೊಂಡು ಕಾರ್ಯನಿರ್ವಹಿಸದೇ ಬೇಕಾಬಿಟ್ಟಿಯಾಗಿ ಬಿಸಿಯೂಟ ತಯಾರಿಸುತ್ತಿದ್ದು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement