15ರಂದು ಪಾಸ್ಪೋರ್ಟ್ ಮೇಳ
ಕೊಪ್ಪ: ತಾಲೂಕು ಒಕ್ಕಲಿಗರ ಮಹಿಳಾ ಸಂಘದ ವತಿಯಿಂದ ಮಾ.15ರಂದು ಬೆಳಗ್ಗೆ 10.30 ಗಂಟೆಗೆ ಬಾಳಗಡಿ ಒಕ್ಕಲಿಗ ಸಮುದಾಯ ಭವನದಲ್ಲಿ ಪಾಸ್ಪೋರ್ಟ್ ಮೇಳ ಏರ್ಪಡಿಸಿಲಾಗಿದೆ. ಮೇಳದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಜನ್ಮ ದಿನಾಂಕದ ದಾಖಲೆ, ಕಾಯಂ ವಿಳಾಸದ ದಾಖಲೆ, ವಿವಾಹಿತರು ಪತಿ-ಪತ್ನಿಯರ ಭಾವಚಿತ್ರದೊಂದಿಗೆ ಪ್ರಮಾಣಪತ್ರ, ಶುಲ್ಕ 2500 ಅರ್ಜಿಯೊಂದಿಗೆ ಮೇಳದಲ್ಲಿ ಪಾಲ್ಗೊಳ್ಳಬಹುದು. ಮೊ.9980033990 ಸಂಪರ್ಕಿಸಿ.