ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಟ್ಟಿಗೆಯಿಂದ ಹೊಡೆದು ಪತಿಯನ್ನೇ ಕೊಂದ ಪತ್ನಿ

Rashmi Kasaragodu
Updated On : 13 Mar 2014, 11:45 am

ಬೀರೂರು: ಗೃಹಿಣಿಯೊಬ್ಬಳು ತನ್ನ ಪತಿಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಅಜ್ಜಂಪುರ ರಸ್ತೆಯಲ್ಲಿ ನಡೆದಿದೆ. ಶ್ವೇತಾ ಎಂಬಾಕೆಯೇ ಪತಿ ಶಿವಾನಂದ ಎಂಬವನನ್ನು ಹತ್ಯೆಗೈದ ಆರೋಪಿ.
ನೆಹರು ನಗರದ 3ನೇ ಕ್ರಾಸಿನಲ್ಲಿ ವಾಸವಾಗಿದ್ದ ಶ್ವೇತಾ ಎಂಬವರು 7 ವರ್ಷದ ಹಿಂದೆ ತಿಪಟೂರು ತಾಲೂಕಿನ ಲಿಂಗದೇವರುಹಳ್ಳಿಯ ಶಿವಾನಂದ ವಿವಾಹವಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ಶ್ವೇತಾ ತನ್ನ ತಾಯಿ, ಮಗು ಲಿಖಿತಾರೊಂದಿಗೆ ಬೇರೆಯಾಗಿ ವಾಸಿಸುತ್ತಿದ್ದರು. ಬುಧವಾರ ಜಗಳ ನಡೆದ ವೇಳೆ ನೀಲಗಿರಿ ಕಟ್ಟಿಗೆಯಿಂದ ಶಿವಾನಂದನ ತಲೆಗೆ ಶ್ವೇತ ಬಲವಾಗಿ ಹೊಡೆದ ಪರಿಣಾಮ ಶಿವಾನಂದ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದ್ದಾನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಶ್ವೇತಾ ಅವರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement