ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾನೂನು ಗೊತ್ತಿರಲಿಲ್ಲವೆಂದು ಕ್ಷಮಿಸಲು ಸಾಧ್ಯವಿಲ್ಲ: ನ್ಯಾ.ನವೀನ್

Rashmi Kasaragodu
Updated On : 13 Mar 2014, 11:45 am

ಶೃಂಗೇರಿ:  ವಿದ್ಯಾರ್ಥಿಗಳು ತಮಗಾಗಿ ಜಾರಿಯಾಗುವ ಕಾನೂನು ಕಾಯ್ದೆಗಳನ್ನು ಸರಿಯಾದ ರೀತಿಯಲ್ಲಿ ಅರಿತುಕೊಂಡು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ನವೀನ್ ತಿಳಿಸಿದರು.
ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಎನ್‌ಎಸ್‌ಎಸ್ ಶಿಬಿರದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ತಿಳಿವಳಿಕೆ ಇಲ್ಲದೇ ಇರುವುದು ಕ್ಷಮೆಗೆ ಅರ್ಹವಾದ ಕಾರಣವಾಗುವುದಿಲ್ಲ. ಕಾನೂನು ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿಕೊಂಡಾಗ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬಹುದು. ರ್ಯಾಗಿಂಗ್ ನಂತಹ ಸಾಮಾಜಿಕ ಪಿಡುಗುಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.
ನ್ಯಾಯವಾದಿಗಳಾದ ಕೆ.ಆರ್. ಸುರೇಶ್ ಹಾಗೂ ಜಿ.ಎಂ. ಸತೀಶ್ ಮಾಹಿತಿ ಹಕ್ಕು ಕಾಯ್ದೆ ಹಾಗೂ ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಎಸ್.ಜಿ. ಶಶಿಭೂಷಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ವಿಭಾಗದ ಮುಖ್ಯಸ್ಥ ಕೆ.ಎಸ್. ವೆಂಕಪ್ಪ, ಪ್ರಗತಿಪರ ಕೃಷಿಕ ನಟೇಶ್ ಕಲ್ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪ್ರಶಾಂತ್ ಸ್ವಾಗತಿಸಿ, ವಿಕ್ರಮ್ ನಿರೂಪಿಸಿ, ಪವಿತ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement