ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮುಂಡಾಲ ಸಮಾಜ ಶಿಕ್ಷಣಕ್ಕೆ ಒತ್ತು ನೀಡಲಿ

Rashmi Kasaragodu
Updated On : 13 Mar 2014, 11:47 am

ಬಾಳೆಹೊನ್ನೂರು: ಇಂದಿನ ಸಮಾಜಕ್ಕೆ ಬೇಕಾದಂತಹ ವ್ಯವಸ್ಥೆ ಹಾಗೂ ಯುವ ಸಮಾಜದ ಕರ್ತವ್ಯದ ಕುರಿತು ಸಂಘಟನೆಗಳು ಅರಿತು ಕಾರ್ಯನಿರ್ವಹಿಸಬೇಕು ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಇಲ್ಲಿಗೆ ಸಮೀಪದ ಸೀಗೋಡಿನಲ್ಲಿ ಅಖಿಲ ಭಾರತ ಶ್ರೀಬಬ್ಬುಸ್ವಾಮಿ ಮುಂಡಾಲ ಸಮಾಜ ಆಯೋಜಿಸಿದ್ದ 3ನೇ ವರ್ಷದ ವಾರ್ಷಿಕ ಮಹೋತ್ಸವ ಹಾಗೂ ನೂತನವಾಗಿ ನಿರ್ಮಿಸಿದ ರಂಗಮಂದಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೋತ್ಸಾಹಿಸಿ:  ಜನರನ್ನು ಸಂಘಟಿಸುವಂತಹ ಕೌಶಲ್ಯತೆ, ಕಾರ್ಯಕ್ಷಮತೆ ಹಾಗೂ ಜಾಣ್ಮೆ ಸಂಘಟನಾ ಮುಖಂಡರಿಗೆ ಇರಬೇಕು. ಸಂಘಟಿಸುವ ಕಾರ್ಯ ವ್ಯಾಪ್ತಿಯೂ ವಿಶಾಲವಾಗಿದೆ. ಮಾನವ ಕುಲದ ಉದ್ಧಾರಕ್ಕಾಗಿ ಶ್ರಮಿಸಬೇಕು. ಸರ್ವರೂ ಸಮಭಾಗಿಗಳಾಗಿ ಕೆಲಸ ಮಾಡಿದಲ್ಲಿ ಸಂಘಟನೆಯು ಉನ್ನತಮಟ್ಟಕ್ಕೆ ಏರುವಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನು ಸಂಘಟಕರು ಅರಿತುಕೊಳ್ಳಬೇಕು. ಮುಂಡಾಲ ಸಮಾಜದವರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನಹರಿಸಿ ಅವರು ಪ್ರೋತ್ಸಾಹಿಸಬೇಕು ಎಂದರು.
ಜೀವನಾಡಿ:  ಜಿ.ಪಂ. ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿ, ಬಬ್ಬುಸ್ವಾಮಿಯ ಆರಾಧನೆ, ಕೋಲ, ನೇಮೋತ್ಸವಗಳು ಮುಂಡಾಲ ಸಮಾಜದ ಜೀವನಾಡಿಯಾಗಿದೆ. ಮಲೆನಾಡಿಗೆ ಈ ಉತ್ಸವಗಳನ್ನು ಪರಿಚಯ ಮಾಡಿಸಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಮುಂಡಾಲ ಸಮಾಜದ ಜೆ.ಸಿ.ಲಕ್ಷ್ಮಣ್ ಶಿರವಾಸೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಿ.ಎನ್. ಜೀವರಾಜ್, ನರಸಿಂಹರಾಜಪುರ ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್, ಉಪನ್ಯಾಸಕ ಲಕ್ಷ್ಮಣ್, ತಾ.ಪಂ. ಸದಸ್ಯೆ ಸುಧಾ, ಹೇರೂರು ಗ್ರಾ.ಪಂ. ಅಧ್ಯಕ್ಷೆ ಶಾಂತ, ಸದಸ್ಯ ಡಿ.ಎನ್. ಜಗದೀಶ್, ಎ.ಸಿ. ಸಂತೋಷ್ ಅರೆನೂರು, ಪದ್ಮ ಗುರಿಕಾರ್, ಚಂದ್ರು ಗುರಿಕಾರ್, ಶೇಖರ್, ಓಡಿ ಮೇಸ್ತ್ರಿ, ಜಿಲ್ಲಾ ಖಜಾಂಚಿ ಲಕ್ಷ್ಮೀ, ಆನಂದ್ ಉಪಸ್ಥಿತರಿದ್ದರು.
 ಮುಂಡಾಲ ಸಮಾಜದ ಹಿರಿಯ ಗುರಿಕಾರರನ್ನು ಇದೇ ಸಂದರ್ಭದಲ್ಲಿ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement