ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ಷೀರ ಭಾಗ್ಯ ಅವ್ಯವಸ್ಥೆ ಎಸ್‌ಡಿಎಂಸಿ ಸ್ಪಷ್ಟನೆ

Rashmi Kasaragodu
Updated On : 14 Mar 2014, 11:39 am

ಮೂಡಿಗೆರೆ: ಹಳೇಹಳ್ಳಿ ಸ.ಹಿ.ಪ್ರಾ. ಪಾಠಶಾಲೆಯ ಮಕ್ಕಳಿಗೆ 15 ದಿನಗಳಿಂದ ಕ್ಷೀರಭಾಗ್ಯವಿಲ್ಲದೇ ವಂಚಿತರಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂಬ ವರದಿಗಳು ಪ್ರಕಟವಾಗಿದ್ದು, ಇದಕ್ಕೆ ಅಕ್ಷರ ದಾಸೋಹ ನೇರ ಹೊಣೆ ಹೊರಬೇಕು ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಜಿ. ರಮೇಶ್  ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಪಂ ಸದಸ್ಯ ಸಬ್ಲೀ ದೇವರಾಜ್ ಶಾಲೆಗೆ ಭೇಟಿ ನೀಡಿದ್ದು ಸಂತಸಕರ ವಿಷಯವಾಗಿದೆ. ಆದರೆ ಕರ್ತವ್ಯದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿರುವ ಮುಖ್ಯೋಪಾಧ್ಯರು ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದವರು ತಿಳಿಸಿದ್ದಾರೆ.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ಬಾರದೇ ಏಕಾಏಕಿಯಾಗಿ ಶಾಲೆಗೆ ಆಗಮಿಸಿ ದಾಖಲಾತಿ ಪರಿಶೀಲಿಸದೆ ಮನಸ್ಸಿಗೆ ಬದಂತೆ ಪತ್ರಿಕೆಗೆ ಹೇಳಿಕೆ ಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದರು.
ಕ್ರಮ ಕೈಗೊಳ್ಳಿ: ಪ್ರತಿ ತಿಂಗಳು ಮುಂಚಿತವಾಗಿ ಹಾಲಿನ ಪೌಡರ್ ಸರಬರಾಜು ಮಾಡುವಂತೆ ಇಂಡೆಂಟ್ ಹಾಕಿದ್ದರೂ, ಹಾಲಿನ ಪೌಡರ್‌ಗಳನ್ನು ಕಳುಹಿಸದೇ ಇರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದನ್ನು ಬಿಟ್ಟು ಮುಖ್ಯೋಪಾಧ್ಯಯರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು. ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 11 ವಿದ್ಯಾರ್ಥಿಗಳಲ್ಲಿ ಕೇವಲ 4 ಮಂದಿ ವಿದ್ಯಾರ್ಥಿಗಳಿಗೆ ಪರಿಸರ ಮಾಲಿನ್ಯದ ಬಗ್ಗೆ ಪುಸ್ತಕ ವಿತರಣೆಯಾಗಿದ್ದು, ಸರ್ಕಾರದಿಂದ ನಾಲ್ಕು ಪುಸ್ತಕಗಳು ಮಾತ್ರ ವಿತರಣೆಯಾಗಿದೆ. ಇದಕ್ಕೆ ಶಿಕ್ಷಕರು ಹೊಣೆಯಾಗುತ್ತಾರೆಯೇ ಎಂದರು.
ಬಿಸಿಯೂಟ ಸಿಬ್ಬಂದಿ ತಲೆಗೆ ಬಟ್ಟೆ ಸುತ್ತಿಕೊಂಡು ಕೈಗೆ ಗ್ಲೌಸ್ ಹಾಕಿಕೊಂಡು ಕಾರ್ಯ ನಿರ್ವಹಿಸದೇ ಬೇಕಾಬಿಟ್ಟಿಯಾಗಿ ಬಿಸಿಯೂಟ ತಯಾರಿಸುತ್ತಿದ್ದು, ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಸಂಬಂಧಿಸಿದ ಇಲಾಖೆಯವರು ಯಾವುದೇ ವಸ್ತ್ರ ನೀಡದೇ ಇದ್ದರೆ ಅವರೇನು ಮಾಡಬೇಕು ಎಂಬುವುದನು ತಾಪಂ ಸದಸ್ಯರು ಅರಿಯಲಿ ಎಂದರು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement