ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೇನು ರೈತನ ಮಿತ್ರ: ನಾಗೇಂದ್ರ

Rashmi Kasaragodu
Updated On : 14 Mar 2014, 11:40 am

ತರೀಕೆರೆ: ಜೇನು ಉಪಕಾರಿ ಕೀಟ ಮಾತ್ರವಲ್ಲದೆ ರೈತನ ಮಿತ್ರ ಎಂದು ಸಂಪನ್ಮೂಲ ವ್ಯಕ್ತಿ, ಜೇನುಕೃಷಿ ತಜ್ಞ ನಾಗೇಂದ್ರ ಸಾಗರ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ, ಜನಚಿಂತನ ಸಂಸ್ಥೆ ವತಿಯಿಂದ ಸಮೀಪದ ಬುಕ್ಕಾಂಬುದಿ ಗ್ರಾಮದಲ್ಲಿ ರಾಜ್ಯ ವಲಯ ಯೋಜನೆಯಡಿ ಏರ್ಪಡಿಸಲಾಗಿದ್ದ ಜೇನುಕೃಷಿ ತರಬೇತಿ ಹಾಗೂ ವಿಚಾರ ಸಂಕಿರಣ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಜೇನು ಅವಿರತ ಶ್ರಮಜೀವಿಯಾಗಿದ್ದು, ಜೇನು ಕುಟುಂಬದಲ್ಲಿ ಸೋಮಾರಿಗಳಿಗೆ ಬದುಕಲು ಅವಕಾಶ ಇಲ್ಲ. ಜೇನಿನ ಜೀವನ ಶೈಲಿ ಮುಂದೆ ನಾವು ಕುಬ್ಜರಾಗುತ್ತೇವೆ, ಜೇನು ಹುಳುಗಳು ನಿಸರ್ಗದಿಂದ ಆಹಾರ ಪಡೆದು ಜೇನುತುಪ್ಪ ನೀಡಿವುದರೊಂದಿಗೆ ರೈತನ ಬೆಳೆಗಳ ಹೆಚ್ಚು ಇಳುವರಿಗೆ ಕಾರಣವಾಗುತ್ತದೆ. ಪರಿಸರ ಉಳುವಿಗೆ ಸಹಕಾರಿಯಾಗುತ್ತದೆ ಹಾಗೂ ಬೀಜೋತ್ಪಾದನೆಗೂ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.
ರೋಗ ನಿರೋಧಕ ಶಕ್ತಿ: ಜೇನುಹುಳುಗಳು ಹವಾಮಾನ ತಜ್ಞರಾಗಿ, ಮಳೆಯ ಮುನ್ಸೂಚನೆ ನೀಡುತ್ತದೆ ಎಂದು ಎಲ್ಲಾ ರೈತರು ಜೇನುಕೃಷಿಯನ್ನು ಕೈಗೊಳ್ಳುವ ಮೂಲಕ ಬೆಳೆಯ ಇಳುವರಿ ಹೆಚ್ಚಿಸಿ ಕೊಳ್ಳಬಹುದು, ಆಹಾರವಾಗಿ ಸೇವಿಸಿದಲ್ಲಿ ರೋಗ ನಿರೋಧಕ ಶಕ್ತಿಯನ್ನು ಪಡೆಯಬಹುದು ಎಂದು ಅವರು ತಿಳಿಸಿದರು. ತಾಪಂ ಸದಸ್ಯೆ ಶಾಂತ ಗುರುಮೂರ್ತಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಜೇನುಕೃಷಿಯನ್ನು ಎಲ್ಲರೂ ಕೈಗೊಳ್ಳಬಹುದು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಕರಿಬಸವನಾಯ್ಕ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ತಿಳಿಸಿ ಅವುಗಳನ್ನು ಪಡೆಯಲು ಅನುಸರಿಸಬೇಕಾದ ಮಾಹಿತಿ ಒದಗಿಸಿದರು. ಜನಚಿಂತನ ಸಂಸ್ಥೆ ಅಧ್ಯಕ್ಷ ಎನ್. ವೀರಭದ್ರಪ್ಪ, ತೋಟಗಾರಿಕೆ ಇಲಾಖೆ ಸೌಮ್ಯಮಾಲ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement