ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಾದಕ ವಸ್ತು ಸೇವನೆ ವಿನಾಶಕ್ಕೆ ಮುನ್ನುಡಿ

Rashmi Kasaragodu
Updated On : 14 Mar 2014, 11:39 am

ಕ.ಪ್ರ.ವಾರ್ತೆ  ಶೃಂಗೇರಿ  ಮಾ. 13
ತನ್ನ ಭವಿಷ್ಯ ಹಾಳು ಮಾಡುವುದರ ಜೊತೆಗೆ ಕುಟುಂಬ, ಸಮಾಜದ ಸ್ವಾಸ್ಥ್ಯವನ್ನೇ  ಹಾಳುಮಾಡುವ ಮಾದಕ ವಸ್ತುಗಳ ಸೇವನೆ ಮನುಷ್ಯನ ವಿನಾಶಕ್ಕೆ ಮುನ್ನುಡಿಯಾಗುತ್ತಿದೆ ಎಂದು ನವದೆಹಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರಾಷ್ಟ್ರೀಯ ವಿಪತ್ತು ನಿರ್ವಾಹಣಾ ತಂಡದ ಸದಸ್ಯ ವಿ.ಎಲ್.ಎಸ್.
ಕುಮಾರ್ ಹೇಳಿದರು.
ಪಟ್ಟಣದ ಜೆಸಿಬಿಎಂ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಎನ್ನೆಸ್ಸೆಸ್ ಶಿಬಿರದಲ್ಲಿ  ಆಯೋಜಿಸಲಾಗಿದ್ದ ಯುವಜನ ಮತ್ತು ಆರೋಗ್ಯ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಅನಿಷ್ಟ ಪದ್ಧತಿ: ಮಾದಕ ವಸ್ತು ಸೇವನೆ ಅನಿಷ್ಟ ಪದ್ಧತಿಯಾಗಿದ್ದು, ದುಶ್ಟಟಕ್ಕೆ ಬಲಿಯಾದ ವ್ಯಕ್ತಿ ತನ್ನ ಯೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಕಡಿತ, ಮಾದಕ ವಸ್ತುಗಳ ಸೇವನೆ, ಸಿಗರೇಟು, ಗುಟ್ಕಾ ಸೇವನೆಗಳಿಂದ ಮಾನಸಿಕ ಹಾಗೂ ದೈಹಿಕ ಅಧಃಪತನದ ಅಂಚಿಗೆ ಸಾಗಿ ಕುಟುಂಬ, ಸಮಾಜಕ್ಕೆ, ದೇಶಕ್ಕೆ ಕಂಟಕಪ್ರಾಯವಾಗುತ್ತಾನೆ.
ಆರೋಗ್ಯವಂತ, ಸದೃಢ ಸಮಾಜ ಕಟ್ಟುವ ಗುರಿಯೊಂದಿಗೆ ಇಂದಿನ ಯುವಜನ ಇಂತಹ ಅಪಾಯಕಾರಿ ಮಾದಕ ವಸ್ತುಗಳ ವಿರುದ್ಧ ರಾಜಿರಹಿತ ಹೋರಾಟ ನಡೆಸಬೇಕಿದೆ. ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವವರು ಹೆಚ್ಚಿನವರು ಯುವಕರೇ ಆಗಿದ್ದು, ಕಾಲೇಜು ಕ್ಯಾಂಪಸ್‌ಗಳಿಂದಲೇ ಮಾದಕ ವಸ್ತುಗಳ ಬಳಕೆ ಆರಂಭವಾಗುತ್ತಿದೆ. ಪೋಷಕರು ಮಕ್ಕಳಲ್ಲಿ ಇದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.
ಕವಳಗೆರೆ ಸುಬ್ರಮಣ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಲಕ್ಷ್ಮಿನಾರಾಯಣ, ಇನ್ನರ್ ವೀಲ್ ಕ್ಲಬ್  ಅಧ್ಯಕ್ಷೆ ಪೂರ್ಣಿಮಾ ಸಿದ್ದಪ್ಪ ಮೊದಲಾದವರು ಉಪಸ್ಥಿತರಿದ್ದರು. ಸುಬ್ರಮಣ್ಯ ಸ್ವಾಗತಿಸಿದರು. ಚಂದ್ರಶೇಖರ್ ನಿರೂಪಿಸಿದರು. ಜ್ಯೋತಿ ವಂದಿಸಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಓಡಿಹೋದ ಹುಡುಗಿ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement