ಇಂದು ಯೋಗ ಮಹೋತ್ಸವ
ಕಡೂರು: ಪಟ್ಟಣದ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಯೋಗ ಮಹೋತ್ಸವ ಸಮಿತಿಯಿಂದ ಮಾ.15ರಂದು ಯೋಗ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 5 ರಿಂದ 6.30ರ ವರೆಗೆ ರಾಯಣ್ಣ ವೇದಿಕೆಯಲ್ಲಿ ಯೋಗ ಮಹೋತ್ಸವ ನಡೆಯಲಿದ್ದು, ಶ್ರೀ ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಯೋಗ ಸಮಿತಿ ಅಧ್ಯಕ್ಷ ಹಾಗೂ ಗುತ್ತಿಗೆದಾರರಾದ ಬೆಂಕಿ ಶೇಖರಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.