ದೇವರ ಕಾರೇಹಳ್ಳಿಯಲ್ಲಿ ರಥೋತ್ಸವ
ಕಡೂರು: ತಾಲೂಕಿನ ಬಾಬಾ ಎಸ್ಟೇಟ್ ಸಮೀಪದ ದೇವರಕಾರೇಹಳ್ಳಿಯಲ್ಲಿ ಕಳೆದ ಮಂಗಳವಾರ ಶ್ರೀಕಾಳಿಕಾಂಬ ಅಮ್ಮನವರ ಬಾನ ಸೇವೆಯೊಂದಿಗೆ ಜಾತ್ರೆಗೆ ಚಾಲನೆ ದೊರೆಯಿತು. ಪ್ರತಿದಿನ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳು ಏರ್ಪಾಡಾಗುವ ಮೂಲಕ ಸುತ್ತಮುತ್ತಲಿನ ಗ್ರಾಮಗಳಲ್ಲದೆ ರಾಜ್ಯದ ಎಲ್ಲೆಡೆಯಿಂದ ಆಗಮಿಸಿದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡರು.
ರಥೋತ್ಸವದ ದಿನವಾದ ಶುಕ್ರವಾರ ಬೆಳಗ್ಗೆ ದೇವಿಗೆ ಬೆಳಗಿನ ಪೂಜೆ, ವಿಶೇಷ ಪೂಜೆಗಳು ನಡೆದು ಸಂಪ್ರದಾಯದಂತೆ ಅಲಂಕರಿಸಿ ವಿಶೇಷ ಪೂಜೆ ನಡೆಸಿ ನಂತರ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.
ಬೆಳಗ್ಗೆ ಸಿಡಿ ಸೇವೆಯಲ್ಲಿ ಹಲವಾರು ಭಕ್ತರು ತಮ್ಮ ಮಕ್ಕಳಿಗೆ ಸಿಡಿ ಆಡಿಸಿ ಹರಕೆ ತೀರಿಸಿದರು.
ಮಧ್ಯಾಹ್ನ 2.30 ರ ವೇಳೆಗೆ ರಥೋತ್ಸವದ ಹಿನ್ನೆಲೆಯಲ್ಲಿ ಶ್ರೀವೀರಭದ್ರಸ್ವಾಮಿ ಹಾಗೂ ಶ್ರೀದೂತರಾಯಸ್ವಾಮಿ ಅವರಿಂದ ಚೋಮನ ದೇವರ ಕುಣಿತ ನಡೆಯಿತು. ಇದೇ ಸಂದರ್ಭ ಪೂಜೆಯ ಕಾಯಿ ಹರಾಜು ನಡೆಯಿತು.