ಪಿಡಿಒ ಮೇಲೆ ಹಲ್ಲೆ
ಮೂಡಿಗೆರೆ: ನೀರಿನ ಕಂದಾಯ ಪಾವತಿಸುವಂತೆ ಬಾಕಿದಾರರ ಮನೆಗೆ ತೆರಳಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಮನೆ ಮಾಲೀಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಪ್ರಕರಣ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದುಸೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಹಲ್ಲೆಗೊಳಗಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಪಿ. ಸೋಮಶೇಖರ್ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ಉದುಸೆ ಗ್ರಾಮದ ಯು.ಎಸ್. ರಮೇಶ್ ಎಂಬವರ ಮನೆಯ ನೀರಿನ ಕಂದಾಯ ಬಾಕಿ ಇದ್ದು, ಅದನ್ನು ಪಾವತಿಸುವಂತೆ ಅಧಿಕಾರಿ ರಮೇಶ್ ಅವರ ಮನೆಗೆ ತೆರಳಿದ್ದರು. ಆಗ ಮನೆ ಮಾಲೀಕ ಯು.ಎಸ್. ರಮೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪಿಡಿಒ ಗೊಣಿಬೀಡು ಪೊಲೀಸರಿಗೆ ದೂರು ನೀಡಿದ್ದಾರೆ.