ವಿಜೃಂಭಣೆಯ ದುರ್ಗಾಂಬ ರಥೋತ್ಸವ
ನರಸಿಂಹರಾಜಪುರ: ಮಡಬೂರಿನ ದಾನಿವಾಸ ದುರ್ಗಾಂಬ ದೇವಸ್ಥಾನದಲ್ಲಿ ಶುಕ್ರವಾರ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ರಾತ್ರಿ ರಾಜಬೀದಿಯಲ್ಲಿ ಮತ್ತೆ ರಥೋತ್ಸವ ನಡೆಯಿತು. ರಥೋತ್ಸವದ ಪ್ರಯುಕ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ದಂಪತಿಗಳು ಸಪ್ತಪದಿ ತುಳಿದರು. ಬೆಳಗ್ಗೆಯಿಂದಲೇ ಬಂದ ಭಕ್ತರು ಅಮ್ಮನರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ದಾನಿವಾಸ ದುರ್ಗಾಂಬ ದೇವಸ್ಥಾನದ ಸಮಿತಿ ವ್ಯವಸ್ಥಾಪಕ ಡಿ.ಸಿ. ದಿವಾಕರ ಪಾಲ್ಗೊಂಡಿದ್ದರು.