ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

25ರಂದು ಜೆಡಿಎಸ್ ಸಮಾವೇಶ

Mainashree
Updated On : 19 Mar 2014, 12:16 pm

ಟೇಕಲ್: ಮಾ.25ರ ಬೆಳಿಗ್ಗೆ 9 ಗಂಟೆಗೆ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಲೋಕಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ಅವರು ಗ್ರಾಪಂ ಮಟ್ಟದಲ್ಲಿ ಸಮಾವೇಶಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಶಾಸಕ ಮಂಜುನಾಥಗೌಡ ತಿಳಿಸಿದರು.
ಟೇಕಲ್‌ನ ಕೆ.ಜಿ.ಹಳ್ಳಿಯಲ್ಲಿ ಜಾತ್ಯಾತೀತ ಜನತಾದಳದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, 25ರಂದು ಲಕ್ಕೂರು, ಸೀತನಾಯಕನಹಳ್ಳಿ, ಡಿ.ಎನ್.ದೊಡ್ಡಿ, ದಿನ್ನಹಳ್ಳಿ, ಮಾಸ್ತಿ, 26ರಂದು ಅಬ್ಬೇನಹಳ್ಳಿ, ಹುಂಗೇನಹಳ್ಳಿ, ಚಿಕ್ಕಕುಂತೂರು, ಕೆ.ಜಿ.ಹಳ್ಳಿ, ತೊರಲಕ್ಕಿ, ಸಂತೇಹಳ್ಳಿ, ಹುಳದೇನಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಯಾ ಪಂಚಾಯ್ತಿ ಮಟ್ಟದ ಕಾರ್ಯಕರ್ತರು, ಮತದಾರರು ಕೇಶವ ಅವರ ಬೃಹತಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕೆಲವು ಗ್ರಾಮಗಳಲ್ಲಿ ಮತಯಾಚನೆ, ಪಾದಯಾತ್ರೆ ಕೂಡ ನಡೆಸಲಾಗುವುದೆಂದು ತಿಳಿಸಿದರು.
ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ, ಕೆಜಿಎಫ್, ಕೋಲಾರ ಎಲ್ಲ ಕಡೆ ರಾಜಕೀಯ ಪ್ರಚಾರ ಕಾರ್ಯ ಮಾಡಲು ಕುಮಾರಸ್ವಾಮಿಯವರು ನನಗೆ ವಹಿಸಿದ್ದು ನನ್ನ ತಾಲೂಕಿನ ಬಗ್ಗೆ ಅಪಾರ ಗೌರವವಿದೆ. ರಾಜ್ಯದಲ್ಲಿಯೆ ಅತ್ಯಧಿಕ ಮತಗಳಿಂದ ಗೆಲ್ಲುತ್ತಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.  ಮಾಜಿ ತಾಪಂ ಅಧ್ಯಕ್ಷ ಕೆ.ವೈ.ನಂಜೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ವಿ.ಚಂದ್ರಶೇಖರಗೌಡ, ಚೌಡರೆಡ್ಡಿ, ಮಾಜಿ ಜಿಪಂ ಸದಸ್ಯ ಹನುಮಂತಪ್ಪ, ಮುಖಂಡರಾದ ತಿಮ್ಮೆಗೌಡ, ಕೆ.ಬಿ.ನಾರಾಯಣಸ್ವಾಮಿ, ಕೆ.ಎಸ್.ವೆಂಕಟೇಶ್, ಎಸ್.ಜಿ.ರಾಮಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement