ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಪಘಾತ: ವ್ಯಕ್ತಿಗೆ ಗಾಯ

Rashmi Kasaragodu
Updated On : 19 Mar 2014, 12:10 pm

ಶೃಂಗೇರಿ: ಮಂಗಳೂರು- ಶಿವಮೊಗ್ಗ ರಾ.ಹೆ. 13 ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ತನಿಕೋಡು ಸಮೀಪ ಮುರುವಿನಕೊಂಬೆ ತಿರುವು ಬಳಿ ಕಾರು ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಮಂಗಳೂರಿನತ್ತ ಹೋಗುತ್ತಿದ್ದ ಕಾರಿಗೆ ಟ್ಯಾಂಕರ್ ಅಪ್ಪಳಿಸಿತ್ತು. ಕಾರು ಸಂಪೂರ್ಣ ಜಖಂಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರುಗಳ ಮುಖಾಮುಖಿ; ಪಟ್ಟಣದ ಹೊರವಲಯದ ರಾಜನಗರ ಶಂಕರಾಪುರ ತಿರುವಿನ ಬಳಿಗೆ ಕಾರುಗಳೆರಡು  ಪರಸ್ಪರ ಡಿಕ್ಕಿಯಾದ ಘಟನೆ ಮಂಗಳವಾರ ಸಂಭವಿಸಿದೆ.
ಯುವಕನ ರಕ್ಷಣೆ
ಮೂಡಿಗೆರೆ: ಪಟ್ಟಣದ ಬಸ್ ನಿಲ್ದಾಣದ ಬಳಿ ಅಪರಿಚಿತ ಯುವಕನೊಬ್ಬನನ್ನು ಬೆತ್ತಲೆಯಾಗಿ ಬಸ್ ನಿಲ್ದಾಣದ ಬಳಿ ಇರುವ ಪ್ರವಾಸಿ ಮಂದಿರದ ಗೇಟಿನ ಸಮೀಪ ಎಸೆದುಹೋಗಿದ್ದು, ನೋವಿನಿಂದ ನೆರಳುತ್ತಿದ್ದ ಯುವಕನನ್ನು ಸಾರ್ವಜನಿಕರು ಮತ್ತು ಪೊಲೀಸರು ಆ್ಯಂಬುಲೆನ್ಸ್ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ 35 ವರ್ಷದ ಯುವಕ ಬೆತ್ತಲೆಯಾಗಿ ಬಿದ್ದಿದ್ದು, ಆತನ ಕೈಕಾಲು ಹೊಟ್ಟೆ ಊದಿಕೊಂಡಿದ್ದು, ಸಾರ್ವಜನಿಕರು, ಪೊಲೀಸರು ಆತನನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement