ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ರಮ ಕೈಗೊಳ್ಳದ ತಂಡ

Rashmi Kasaragodu
Updated On : 19 Mar 2014, 12:07 pm

ಮೂಡಿಗೆರೆ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನೀತಿ ಸಂಹಿತೆಯನ್ನು ಅಚ್ಚುಕಟ್ಟಾಗಿ ಪಾಲನೆ ಮಾಡುವ ಸಲುವಾಗಿ ಈಗಾಗಲೆ ಚುನಾವಣಾ ಆಯೋಗವು ತಾಲೂಕಿನಲ್ಲಿ ವಿವಿಧ ತಂಡ ರಚಿಸಿದ್ದು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶ ಗುರುತಿಸಿಲ್ಲ. ಅಲ್ಲದೆ, ಇಂದಿಗೂ ವಿಡಿಯೋ ಚಿತ್ರೀಕರಣದ ತಂಡ ರಚಿಸದೇ ಇರುವುದರಿಂದ ಕೆಲ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ತಾಲೂಕಿನ ಎಲ್ಲಾ ಹೋಬಳಿ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿರುವ ಬ್ಯಾನರ್, ಬಂಟಿಂಗ್, ಫ್ಲೆಕ್ಸ್ ತೆರವುಗೊಳಿಸಲಾಗಿದೆ. ಅಲ್ಲದೆ, ಎಂಸಿಸಿ, ಸೆಕ್ಟರ್ ಮತ್ತು ಸರ್ವೆಯೆನ್ಸ್ ತಂಡ ರಚಿಸಲಾಗಿದೆ. ಆದರೆ, ಈ ತಂಡಗಳು ನೀತಿ ಸಂಹಿತೆ ಉಲ್ಲಂಘನೆ ಮಾಡಿದರೂ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಒಂದು ವಾರದ ಮುಂಚೆಯೇ ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಎಲ್ಲಾ ತಂಡಗಳು ಕಾರ್ಯಗತವಾಗಿದ್ದವು.
ಮಂಗಳವಾರ ಫಲ್ಗುಣಿ ಜಾತ್ರೆಯಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಹಣ ಹಂಚುವ ಮಾಹಿತಿ ಸಿಕ್ಕ ಕೂಡಲೆ ಅಧಿಕಾರಿಗಳು ವಿಡಿಯೋ, ಛಾಯಾಗ್ರಾಹಕರಿಲ್ಲದೆ ಸ್ಥಳಕ್ಕೆ ತೆರಳಿದ್ದು ಹಾಸ್ಯಾಸ್ಪದವಾಗಿತ್ತು. ಇತ್ತೀಚೆಗೆ ಪಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಯಾದ ಮರುದಿನವೇ ಜೆ.ಎಂ. ರಸ್ತೆಯಲ್ಲಿ ಶಾಮಿಯಾನ ಹಾಕಿ ಬಾಡೂಟ ಮಾಡಿಸಲಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗದ ತಂಡದ ಅಧಿಕಾರಿಗಳಿಗೆ ತಿಳಿದಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಕೂಡಲೇ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳು ಎಚ್ಚರ ವಹಿಸಬೇಕಾಗಿದೆ ಎಂಬುದು ಪ್ರಜ್ಞಾವಂತರ ಮನವಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement