ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಸಾಧನೆ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮಾ. 18
ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಡಿಸೆಂಬರ್ನಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ನಗರದ ಸೆಂಟ್ ಮೇರಿಸ್ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಎನ್.ರಾವ್, ಸಬ್ ಜ್ಯೂನಿಯರ್ ಲೆವೆಲ್- 2 ನಲ್ಲಿ ಡಿಸ್ಟಿಂಕ್ಷನ್ ಮತ್ತು ಆಲ್ ಇಂಡಿಯಾ 50ನೇ ರ್ಯಾಂಕ್ ಮೆರಿಟ್ ಸ್ಕಾಲರ್ಶಿಪ್ ಪಡೆದುಕೊಂಡಿದ್ದಾಳೆ.
ವೈಷ್ಣವಿಯು ಕಲ್ಕಟ್ಟೆ ಪುಸ್ತಕಮನೆ ನಾಗರಾಜರಾವ್ ಹಾಗೂ ರೇಖಾ ನಾಗರಾಜರಾವ್ ದಂಪತಿಯ ಪುತ್ರಿ. ನಾಟಕ, ಭಾಷಣ, ಚರ್ಚೆ, ಸಂಗೀತ, ನಾಟ್ಯ, ಚಿತ್ರಕಲೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ವೈಷ್ಣವಿ, ಸತತ ಎರಡನೇ ವರ್ಷ ರ್ಯಾಂಕ್ ಪಡೆದಿದ್ದಾಳೆಂದು ಶಾಲೆಯ ಪ್ರಾಂಶುಪಾಲರಾದ ಸ್ಯಾಮ್ಯ್ ಡ್ಯಾನಿಯಲ್ ಮತ್ತು ಶಿಕ್ಷಕ ವೃಂದದವರು ಶ್ಲಾಘಿಸಿದ್ದಾರೆ.