ಸೋಡಿಯಂ ದೀಪ ವಿತರಣೆ
ಕಡೂರು: ಜನರಿಗೆ ಕೇವಲ ಭರವಸೆ ನೀಡುವಂತವರನ್ನು ಆಯ್ಕೆ ಮಾಡುವುದಕ್ಕಿಂತ ಸೂಕ್ತವಾಗಿ ಸ್ಪಂದಿಸಿ, ಸಮಸ್ಯೆ ಪರಿಹರಿಸುವ ಜನಪ್ರತಿನಿಧಿಗಳನ್ನು ಮಾತ್ರ ಆಯ್ಕೆ ಮಾಡಿದಲ್ಲಿ ಜನರ ಹಾಗೂ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಅಖಿಲ ಭಾರತ ಉಪ್ಪಾರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಗಿರೀಶ್ ಜಿ. ಉಪ್ಪಾರ ಹೇಳಿದರು.
ಅವರು ಕಡೂರು ತಾಲೂಕಿನ ಮುಗಳೀಕಟ್ಟೆ, ಸಿಂಗಟಗೆರೆ, ಗೌಡನಕಟ್ಟೆಹಳ್ಳಿ, ಗುಡ್ಡೇಹಳ್ಳಿ ಸೇರಿದಂತೆ ತಾಲೂಕಿನ 30 ಹಳ್ಳಿಗಳ ದೇವಾಲಯಗಳಿಗೆ ರು. 2.70 ಲಕ್ಷ ವೆಚ್ಚದ ಸೋಡಿಯಂ ದೀಪ ವಿತರಿಸಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
ಉಪ್ಪಾರ ಸಮುದಾಯದ ಮುಖಂಡ ವಕೀಲ ಶೇಷಣ್ಣ, ನರಸಿಂಹಮೂರ್ತಿ, ಜಿ.ಕೆ. ಕಲ್ಲೇಶಪ್ಪ, ಶಾಂತಕುಮಾರ್, ಚೇತನ್, ಗುಡ್ಡೇಹಳ್ಳಿ ಮಹೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.