ಹೋಬಳಿ ಮಟ್ಟದ ಬಿಜೆಪಿ ಸಭೆ
ಕ.ಪ್ರ.ವಾರ್ತೆ, ಕೊಪ್ಪ, ಮಾ. 18 ಈ ಭಾಗದ ಜ್ವಲಂತ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿ ಅವುಗಳನ್ನು ಪರಿಹರಿಸಿಕೊಡುವಂತಹ ಶಕ್ತಿ ಹೊಂದಿರುವ ಶೋಭಾ ಕರಂದ್ಲಾಜೆಯವರನ್ನು ಈ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಿಕೊಡಬೇಕಾದ ಅನಿವಾರ್ಯತೆ ನಮಗೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್. ಜೀವರಾಜ್ ಹೇಳಿದರು.
ಮಂಗಳವಾರ ಪಟ್ಟಣದ ಲಕ್ಕವಳ್ಳಿ ಮಂಜಪ್ಪ ನಾಯಕ ಲಯನ್ಸ್ ಸಭಾಗಂಣದಲ್ಲಿ ಏರ್ಪಡಿಸಿದ್ದ ಕಸಬಾ ಹೋಬಳಿ ಮಟ್ಟದ ಬಿಜೆಪಿ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಗೋರಕ್ ಸಿಂಗ್ ವರದಿ ಶಿಫಾರಿಸಿನ ಅಧಾರ ಮೇಲೆ ಅಡಕೆ ಹಳದಿರೋಗ ಪೀಡಿತರ ಸಾಲಮನ್ನಾ ಮಾಡುವುದಾಗಿ ಅಡಕೆ ಬೆಳೆಗಾರರಿಗೆ ಸುಳ್ಳು ಭರವಸೆ ನೀಡಿ, ಲೋಕಸಭೆಗೆ ಆಯ್ಕೆಯಾಗಿ ಹೋದ ಜಯಪ್ರಕಾಶ್ ಹೆಗ್ಡೆ ಸಾಲವಮನ್ನಾ ಮಾಡಿಸಲೇ ಇಲ್ಲ ಎಂದರು.
ಐಟಿಸಿ ಲಾಬಿ: ಕೇಂದ್ರ ಸರ್ಕಾರ ಐಟಿಸಿ ಲಾಬಿಗೆ ಮಣಿದು ಅಡಕೆ ಬೆಳೆಯನ್ನು ನಿಷೇಧ ಮಾಡಿ, ಅಡಕೆ ಬೆಳೆಗಾರರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದರು.
ಅದನ್ನು ತಡೆಯುವಂತಹ ಪ್ರಯತ್ನ ಮಾಡದೇ. ಅಡಕೆ ಬೆಳೆ ನಿಷೇಧಿಸುವುದಕ್ಕೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಯಾವ ಅಫೀಡೇವಿಟ್ ಸಲ್ಲಿಸಿಲ್ಲ ಎಂದು ಸುಳ್ಳು ಹೇಳುತ್ತ ಮತ್ತೊಮ್ಮೆ ಜನರ ಕಣ್ಣಿಗೆ ಮಣ್ಣು ಎರಚುತ್ತಿರುವುದು ವಿಷಾದನೀಯ ಎಂದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಪದ್ಮಾದ್ಮವತಿ ರಮೇಶ್,ಉಪಾಧ್ಯಕ್ಷ ಪೂರ್ಣಚಂದ್ರ,ಸದಸ್ಯರಾದ ನಾರಯಾಣ್,ರಮೇಶ್,ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಎನ್.ಬಾಸ್ಕರ್ ರಾವ್,ಮುಖಂಡರಾದ ದಿನೇಶ್ಹೊಸೂರ್,ಮಹಾಬಲ್ ರಾವ್,ಪುಣ್ಯಪಾಲ್,ಅನ್ನಪೂರ್ಣ ಚನ್ನಕೇಶವ, ಮತ್ತಿತರು ಹಾಜರಿದ್ದರು