108 ವಾಹನದಲ್ಲೆ ಮಗು ಜನನ
ನರಸಿಂಹರಾಜಪುರ: ಹೊಟ್ಟೆ ನೋವು ಕಾಣಿಸಿಕೊಂಡ ಮಹಿಳೆಯೊಬ್ಬರು 108 ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾಗ ಮಾರ್ಗ ಮದ್ಯದಲ್ಲಿ ವ್ಯಾನ್ನಲ್ಲೇ ಹೆರಿಗೆಯಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಗುಳದಮನೆಯ ಕೀರ್ತಿ ಎಂಬುವರು ಗುರುವಾರ ಬೆಳಗ್ಗೆ 6 ಗಂಟೆಗೆ ಹೆರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ 108 ವಾಹನದಲ್ಲಿ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾಗ ಮಾರ್ಗ ಮದ್ಯೆ ನೋವು ಜಾಸ್ತಿಯಾಗಿದೆ. ಕೂಡಲೇ ವಾಹನ ನಿಲ್ಲಿಸಿದ 108 ನ ಸ್ಟಾಪ್ ನರ್ಸ್ ಬೋಜನಾಯಕ್ ಮತ್ತು ವೇದಾವತಿಯವರು ವಾಹನದಲ್ಲೇ ಹೆರಿಗೆ ಮಾಡಿಸಿದ್ದಾರೆ. ಕೀರ್ತಿ ಅವರು ಗಂಡುಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.