ಚರಂಡಿ ದುರಸ್ತಿಗೆ ಆಗ್ರಹ
ಮೂಡಿಗೆರೆ: ಪಟ್ಟಣದ ಕಡೂರು- ಮಂಗಳೂರು ರಸ್ತೆ ಮೃತ್ಯುಕೂಪವಾಗಿ ಪರಿಣಮಿಸಿದ್ದು, ಇದಕ್ಕೆ ಪಪಂ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಸಾಕ್ಷಿಯಾಗಿದೆ.
ಪಟ್ಟಣದ ಗಂಗನಮಕ್ಕಿ ಬಳಿ ಮೊರಾರ್ಜಿ ಶಾಲೆಗೆ ಹೋಗುವ ದಾರಿಗೆ ಯಾವುದೇ ತಡೆಗೋಡೆ ನಿರ್ಮಿಸದೇ ಇರುವುದರಿಂದ ಕತ್ತಲೆ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ದೊಡ್ಡ ವಾಹನಗಳು 10 ಅಡಿ ಚರಂಡಿಗೆ ಉರುಳುತಿದ್ದು, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಕರವೇ ಅಧ್ಯಕ್ಷ ಪ್ರಸನ್ನ ದಾರದಹಳ್ಳಿ ತಿಳಿಸಿದ್ದಾರೆ.
ತಕ್ಷಣವೇ ತಡೆಗೋಡೆ ನಿರ್ಮಿಸಿ ಜನರ ಜೀವ ಉಳಿಸುವಂತೆ ತಪ್ಪಿದಲ್ಲಿ ಲೋಕೋಪಯೋಗಿ ಇಲಾಖೇ ಹಾಗೂ ಪಟ್ಟಣ ಪಂಚಾಯಿತ್ ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಕರವೇ ಮುಖಂಡ ಗೌರವಾಧ್ಯಕ್ಷ ರಘು ಹೊರಟ್ಟಿ, ಧರ್ಮವೀರ, ರವಿ ಉಪಸ್ಥಿತರಿದ್ದರು.