ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚುನಾವಣಾ ಕರಪತ್ರ ಮುದ್ರಣ ಪ್ರಿಂಟಿಂಗ್ ಪ್ರೆಸ್‌ಗಳಿಗೆ ಸೂಚನೆ

Rashmi Kasaragodu
Updated On : 21 Mar 2014, 12:07 pm

ಕ.ಪ್ರ.ವಾರ್ತೆ   ಚಿಕ್ಕಮಗಳೂರು   ಮಾ. 20
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ಕರಪತ್ರ, ಪೋಸ್ಟರ್‌ಗಳನ್ನು ಮುದ್ರಿಸುವಾಗ ಮುದ್ರಕರು ಪ್ರಜಾಪ್ರತಿನಿಧಿ ಕಾಯ್ದೆ 127ಎ ಪ್ರಕಾರ ಮುದ್ರಣ ಕಾರ್ಯನಿರ್ವಹಿಸಬೇಕಿದೆ.
ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ಯಾವುದೇ ಮುದ್ರಣದ ಕೊನೆಯಲ್ಲಿ ಮುದ್ರಕರು ಮತ್ತು ಪ್ರಕಾಶಕರ ಹೆಸರು ಹಾಗೂ ವಿಳಾಸವನ್ನು ಕಡ್ಡಾಯವಾಗಿ ಪ್ರಕಟಿಸಬೇಕಿದೆ.
ಮುದ್ರಿಸಿದ 3 ದಿನಗಳೊಳಗಾಗಿ ಅದರ 3 ಪ್ರತಿಗಳನ್ನು ಹಾಗೂ 127ಎ(2)ರ ಕಾಯ್ದೆಯನ್ವಯ ಪ್ರಕಾಶಕರಿಂದ ಡಿಕ್ಲರೇಷನ್ ಪಡೆದು ಮತ್ತು ಮುದ್ರಕರು ಘೋಷಣಾ ಪತ್ರವನ್ನು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಗೆ ಸಲ್ಲಿಸಬೇಕು.
ಈ ಕಾಯ್ದೆಯನ್ನು ಉಲ್ಲಂಘಿಸಿದರೆ ಅದನ್ನು ಮುದ್ರಕರ ವಿರುದ್ಧ ಗಂಭೀರವಾಗಿ ಪರಿಗಣಿಸಿ, ಪ್ರಿಟಿಂಗ್ ಪ್ರೆಸ್‌ಗಳ ಲೈಸನ್ಸ್ ರದ್ದುಪಡಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಾರ್ತಾ ಭವನದಲ್ಲಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಕಚೇರಿಗೆ ಸಂಪರ್ಕಿಸಬಹುದೆಂದು ಜಿಲ್ಲಾ ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement