ಮತದಾರರ ಜಾಗೃತಿ ಕಾರ್ಯಕ್ರಮ
ಕ.ಪ್ರ.ವಾರ್ತೆ ಮೂಡಿಗೆರೆ ಮಾ. 20
ಭ್ರಷ್ಟ ರಾಜಕಾರಣಿಗಳು ಕೊಡುವ ಆಮಿಷಕ್ಕೆ ಮತದಾರರು ಒಳಗಾಗದೇ ರಾಷ್ಟ್ರೀಯ ಸಮಸ್ಯೆಗೆ ಸ್ಪಂದಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಮತದಾರರ ವೇದಿಕೆ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ತಿಳಿಸಿದರು.
ಫಲ್ಗುಣಿ ಗ್ರಾಮದಲ್ಲಿ ರಾಜ್ಯ ಯುವ ಜಾಗೃತಿ ಮತದಾರರ ವೇದಿಕೆಯ ವತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣಿಗಳು ನೀಡುವ ಎಂಜಲು ಕಾಸಿಗೆ ಮಾರು ಹೋಗಿ ಸ್ವಾಭಿಮಾನವನ್ನು ಕಳೆದುಕೊಳ್ಳಬೇಡಿ ಎಂದರು.
ತಾಲೂಕು ಸಂಚಾಲಕ ಗೆಂಡೇಹಳ್ಳಿ ಮೋಹನ್ ಸಾರ್ವಜನಿಕರಿಗೆ ಮತದಾರರ ಜಾಗೃತಿ ಬಗ್ಗೆ ಕರ ಪತ್ರ ವಿತರಿಸಿದರು.