ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮತಗಟ್ಟೆಗಳಿಗೆ ಅಧಿಕಾರಿ ಭೇಟಿ

Lingaraj Badiger
Updated On : 24 Mar 2014, 12:04 pm

ಮೂಡಿಗೆರೆ: ತಾಲೂಕಿನ ಗ್ರಾಮೀಣ ಪ್ರದೇಶದ ವಿವಿಧ ಮತಗಟ್ಟೆಗಳಿಗೆ ಸಹಾಯಕ ಚುನಾವಣಾಧಿಕಾರಿ ಚೆನ್ನಬಸಪ್ಪ ಭೇಟಿ ನೀಡಿ ವೀಕ್ಷಿಸಿದರು.
ಕುಂದೂರು ಮತಗಟ್ಟೆ ಸಂಖ್ಯೆ 86ಕ್ಕೆ ಭೇಟಿ ನೀಡಿ ಪರಿಶೀಲಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಮತಚಲಾಯಿಸುವುದು ಪ್ರತಿಯೊಬ್ಬರ ಹಕ್ಕು, ಭೀತಿಯಿಲ್ಲದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸುವಂತೆ ಗ್ರಾಮಸ್ಥರಲ್ಲಿ ಮನವಿಮಾಡಿದರು.
ಮತದಾನ ಬಹಿಷ್ಕರಿಸುವಂತೆ ಅಥವಾ ಮತ ಚಲಾಯಿಸದಂತೆ ಅಡ್ಡಿಪಡಿಸಿದಲ್ಲಿ ತಮ್ಮನ್ನಾಗಲೀ ಅಥವಾ ಇತರೆ ಚುನಾವಣೆ ಸಿಬ್ಬಂದಿಗೆ ಅಥವಾ ಟೋಲ್ ಫ್ರೀ ದೂರವಾಣಿಗೆ ಕರೆ ಮಾಡಿ ದೂರು ನೀಡುವಂತೆ ಸೂಚಿಸಿದರು. ಬಣಕಲ್ ಹೋಬಳಿಯ ಕೊಟ್ಟಿಗೆಹಾರದಲ್ಲಿ ಚುನಾವಣೆ ಅಕ್ರಮ ತಡೆಯುವ ನಿಟ್ಟಿನಲ್ಲಿ ತೆರೆಯಲಾಗಿರುವ ತನಿಖಾ ಠಾಣೆಗೆ ತೆರಳಿ ಪರಿಶೀಲಿಸಿದರು.
ಕೊಟ್ಟಿಗೆಹಾರ ಬೇರೆ ಜಿಲ್ಲೆಗಳಿಂದ ತಾಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರವಾಗಿದ್ದು. ದಿನದ 24 ಗಂಟೆಗಳ ಕಾಲವೂ ಸೂಕ್ತ ರೀತಿಯಲ್ಲಿ ತಪಾಸಣೆ ನಡೆಸಬೇಕು, ಚೆಕ್‌ಪೋಸ್ಟ್ ಮೂಲಕ ಆಗಮಿಸುವ ಪ್ರತಿ ವಾಹನಗಳ ವಿಡಿಯೋ ಚಿತ್ರಿಕರಣ ಮೂಲಕ ತಪಾಸಣೆ ನಡೆಸಿ ದಾಖಲೆ ಮಾಡಿ ಪ್ರತಿನಿತ್ಯ ವರದಿ ಸಲ್ಲಿಸುವಂತೆ ಸಿಬ್ಬಂದಿಗೆ ತಿಳಿಸಿದರು.
ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಎಂ. ಗಂಗಾಧರ್, ಚುನಾವಣಾ ಸಿಬ್ಬಂದಿ  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement