ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಲೋಕಸಭೆ ಚುನಾವಣೆ: ಅಂತಿಮ ದಿನ 8 ಅಭ್ಯರ್ಥಿಗಳಿಂದ 13 ನಾಮಪತ್ರ

Lingaraj Badiger
Updated On : 27 Mar 2014, 12:22 pm

ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ  ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಬುಧವಾರ 8 ಮಂದಿ ಅಭ್ಯರ್ಥಿಗಳು 13 ನಾಮಪತ್ರ ಸಲ್ಲಿಸಿದ್ದಾರೆ.  
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಅವರು 4 ನಾಮಪತ್ರ, ಬಿಜೆಪಿಯಿಂದ ಶೋಭಾ ಕರಂದ್ಲಾಜೆ 3 ನಾಮಪತ್ರ, ಸಿಪಿಐ (ಎಂ.ಎಲ್.) ರೆಡ್ ಸ್ಟಾರ್‌ನ ಸಿ.ಜೆ. ಜಗನ್ನಾಥ್, ಪಕ್ಷೇತರ ಅಭ್ಯರ್ಥಿಗಳಾಗಿ ಬಿ. ಧನಂಜಯ, ಎಂ.ಡಿ. ಮೊಯಿದ್ದೀನ್ ಖಾನ್, ಮಂಜುನಾಥ, ಶ್ರೀನಿವಾಸ್, ಸುಧೀರ್ ಕಾಂಚನ್ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಬಿಜೆಪಿ- 4, ಕಾಂಗ್ರೆಸ್- 4,  ಜೆಡಿಎಸ್- 2, ಸಿಪಿಐ (ಎಂ.ಎಲ್.) ರೆಡ್ ಸ್ಟಾರ್- 2,  ಬಿಎಸ್‌ಪಿ- 1, ಆಮ್ ಆದ್ಮಿ ಪಕ್ಷ- 1, ಸಿಪಿಐ- 1 ಮತ್ತು ಪಕ್ಷೇತರ ಅಭ್ಯರ್ಥಿಗಳ 8 ನಾಮಪತ್ರ ಸೇರಿದಂತೆ ಒಟ್ಟು 23 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರಗಳ ಪರಿಶೀಲನೆ ಮಾ.27ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಮಾ. 29 ಕೊನೆಯ ದಿನಾಂಕವಾಗಿರುತ್ತದೆ ಎಂದು ಚುನಾವಣಾಧಿಕಾರಿ ಡಾ. ಮುದ್ದುಮೋಹನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement