ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೆಜ್ಜೇನು ದಾಳಿ: 6 ಮಂದಿಗೆ ಗಾಯ

Lingaraj Badiger
Updated On : 28 Mar 2014, 12:21 pm

ಕೊಪ್ಪ: ರಾಹೆ 13ರಲ್ಲಿ ತೀರ್ಥಹಳ್ಳಿಗೆ ತೆರಳುವ ಅಮ್ಮಡಿ ಗಣಪತಿ ದೇವಸ್ಥಾನದ ಬಳಿ ಹೆಜ್ಜೇನು ನೊಣಗಳು ಕಡಿದು 6 ಮಂದಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ರಸ್ತೆ ಬದಿಯ ಸೀಗೆ ಬಿಳಿನಲ್ಲಿ ಬೀಡು ಬಿಟ್ಟಿರುವ ಹೆಜ್ಜೇನು ಹುಟ್ಟಿಗೆ ಗಿಡುಗ ದಾಳಿ ಮಾಡಿರುವುದರಿಂದ ರೊಚ್ಚಿಗೆದ್ದಿರುವ ಹೆಜ್ಜೇನು ನೊಣಗಳು ದಾರಿಹೋಕರ ಮೇಲೆ ದಾಳಿ ಮಾಡುತ್ತಿವೆ. ಬುಧವಾರ ಅಂಗನವಾಡಿಗೆ ತೆರಳುತ್ತಿದ್ದ ನಾಲ್ಕು ಮಕ್ಕಳ ಮೇಲೆ ಹೆಜ್ಜೇನು ನೊಣಗಳು ಕಚ್ಚಿವೆ. ಗುರುವಾರ ಶಾಲಾ ಮಕ್ಕಳ ಮೇಲೆ ಎರಗಿರುವುದಲ್ಲದೆ ಚುನಾವಣಾ ವಿಡಿಯೋ ಚಿತ್ರಿಕರಣಕ್ಕೆ ಹೊರಟ ಉಮೇಶ್, ಸುಬ್ಬರಾವ್, ಭಾಸ್ಕರ್ ಎಂಬವರ ಮೇಲೆ ದಾಳಿ ಮಾಡಿದ್ದು, ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ಬೈಕ್ ಸವಾರರ ಮೇಲೆ ದಾಳಿ ಹೆಚ್ಚಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement