ಕರವೇಯಿಂದ ಮಾತ್ರ ಕನ್ನಡ ಪರ ಹೋರಾಟ
ಕ.ಪ್ರ.ವಾರ್ತೆ ಮೂಡಿಗೆರೆ ಮಾ. 28
ಕನ್ನಡದ ಪರ ಯಾವುದೇ ರಾಜಕೀಯ ಪಕ್ಷಗಳು ಹೋರಾಟ ಮಾಡುತ್ತಿಲ್ಲ. ಕನ್ನಡದ ಪರ ಹೋರಾಟ ಮಾಡುವುದಾದರೆ ಅದು ಕರ್ನಾಟಕ ರಕ್ಷಣಾ ವೇದಿಕೆ ಮಾತ್ರ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದರು.
ಗುರುವಾರ ಕಳಸ ಪಟ್ಟಣಕ್ಕೆ ಭೇಟಿ ನೀಡಿ ಸಂಘದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕರ್ನಾಟಕ ರೇಲ್ವೆ, ವಿಮಾನ ನಿಲ್ದಾಣ ಹಾಗೂ ವಿವಿಧ ಪ್ರತಿಷ್ಠಿತ ಕಂಪೆನಿಗಳಲ್ಲಿ ಇಂದು ಲಕ್ಷಾಂತರ ಕನ್ನಡಿಗರು ಉದ್ಯೋಗ ಮಾಡುತ್ತಿದ್ದಾರೆ ಎಂದಾದರೆ ಅದು ಕರವೇ ಮಾಡುತ್ತಿರುವ ಹೋರಾಟದ ಫಲವಾಗಿ ಹೊರತು, ಯಾವುದೇ ರಾಜಕೀಯ ಪಕ್ಷದ ಒತ್ತಡದಿಂದ ಅಲ್ಲ ಎಂದರು.
ರಾಜ್ಯ ಉಪಾಧ್ಯಕ್ಷ ದಾ.ಪಿ. ಆಂಜನಪ್ಪ, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಜಿಲ್ಲಾ ಮಹಿಳಾ ಅಧ್ಯಕ್ಷೆ ರೇಣುಕಾ ಪರಮೇಶ್, ಕರವೇ ಹೋಬಳಿ ಅಧ್ಯಕ್ಷ ವಿಶ್ವನಾಥ ಗೌಡ, ಶ್ರೇಣಿಕ್, ರವಿರೈ, ವಿಜಯ್ ಕುಮಾರ್, ಸುಬ್ಬಣ್ಣ, ಅಬ್ಬಕ್ಕ, ಉಮೇಶ್ ಗಾಳಿಗಂಡಿ, ಅನಿಲ್ ಭಂಡಾರಿ, ಸ್ಟೀಪನ್, ಸಲೀಂ ಮೊದಲಾದವರು ಇದ್ದರು.