ಕಾಂಗ್ರೆಸ್‌ಗೆ 15 ರಿಂದ 20 ಸ್ಥಾನ ಖಚಿತ: ಆನಂದ
ಕಡೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಣಾಳಿಕೆಯಲ್ಲಿ ಹೇಳಿದ ಜನ ಸಾಮಾನ್ಯರ 94 ಭರವಸೆ ಈಡೇರಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 15 ರಿಂದ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲವು ಖಚಿತ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಆನಂದ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಆಡಳಿತ ವ್ಯವಸ್ಥೆ ಕುಸಿದಾಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಸಮಯದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯವನ್ನು ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ, ಮಕ್ಕಳಿಗೆ ಪೌಷ್ಟಿಕಾಂಶದ ಕ್ಷೀರಭಾಗ್ಯ, ಅವಿವಾಹಿತ ಮಹಿಳೆಯರಿಗೆ ರು. 1,000 ಮಾಸಾಶನ ಸೇರಿದಂತೆ ಹಲವು ಭರವಸೆ ಈಡೇರಿಸಿದ್ದಾರೆ ಎಂದರು.
ಸಂಸದರ ವ್ಯಾಪ್ತಿಗೆ ಬರುವ ಕಡೂರು ರೈಲು ನಿಲ್ದಾಣ ಕಳಪೆಯಾಗಿದ್ದು, ಯಾವ ಕ್ಷಣದಲ್ಲಿ ಕುಸಿಯುತ್ತದೋ ಎಂಬ ಭಯದಿಂದ ವಿಶ್ರಾಂತಿಗೆ ಆಗಮಿಸುವ ವೃದ್ಧರು ಹೆದರಿ ಅತ್ತೆ ತಲೆ ಹಾಕುತ್ತಿಲ್ಲ. ಇಂತಹ ಕಳಪೆ ಕಾಮಗಾರಿ ಬಗ್ಗೆ ಗೌಡರ ಗಮನಕ್ಕೆ ತಂದರೂ ಯಾವ ಕ್ರಮ ಕೈಗೊಳ್ಳಲಿಲ್ಲ. ಶಾಸಕರಾಗಿರುವ ವೈ.ಎಸ್.ವಿ. ದತ್ತ ಕ್ಷೇತ್ರದ ಜನರಿಗೆ ಸಿಗದೆ ಬೆಂಗಳೂರಿನಲ್ಲಿರುತ್ತಾರೆ ಎಂದು ಆರೋಪಿಸಿದರು.
ಪಕ್ಷದ ಮುಖಂಡ ಡಿ.ಎಸ್. ಉಮೇಶ್, ವೆಂಕಟೇಶ್, ಹಿರೇಗರ್ಜೆ ರವಿ, ಹರೀಶ್ ಇದ್ದರು.