ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಜೆಪಿ ಅಭ್ಯರ್ಥಿ ಬೆಂಬಲಿಸಿ

Mainashree
Updated On : 29 Mar 2014, 11:22 am

ಕ.ಪ್ರ. ವಾರ್ತೆ, ಮೂಡಿಗೆರೆ, ಮಾ.28
ಲೋಕಸಭೆಯಲ್ಲಿ ನಮ್ಮ ಪ್ರತಿನಿಧಿಯಾಗುವವರು ಕ್ಷೇತ್ರದ ಬಗ್ಗೆ ಸಮಸ್ಯೆಗಳನ್ನು ಅರಿತು ಅವುಗಳನ್ನು ಸಮರ್ಥವಾಗಿ ಮಂಡಿಸಿದಲ್ಲಿ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಎಂದು ಶಾಸಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜನ್ನಾಪುರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಮತ ಯಾಚನೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು. ಮಲೆನಾಡು ಭಾಗದಲ್ಲಿ ಅರಣ್ಯ ಒತ್ತುವರಿ ಬಗ್ಗೆ, ರೈತರ ಬಗ್ಗೆ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ, ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ, ಅಧ್ಯಯನ ಮಾಡಿರ ಬೇಕು. ಈ ಭಾಗದಿಂದ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿ ಲೋಕಸಭೆಯಲ್ಲಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ಯಾವ ಚಕಾರವನ್ನು ಎತ್ತದೆ ಮೌನವಾಗಿ ಕುಳಿತಿದ್ದರ ಪರಿಣಾಮ, ಇಂದು ಒತ್ತುವರಿ ತೆರವು ಪ್ರಕರಣ ಕುಡಿಯುವ ನೀರಿಗಾಗಿ ಜನರು ತತ್ತರಿಸುತ್ತಿದ್ದಾರೆ ಎಂದರು.
ಮೋದಿ ಪ್ರಧಾನಿಯಾಗಬೇಕು: ಲೋಕಸಭಾ ಚುನಾವಣೇ ದೇಶದ ಭವಿಷ್ಯವನ್ನು ನಿರ್ದಾರ ಮಾಡುವಂತಹ ಚುನಾವಣೆ ಎಂದು ಪ್ರತಿಯೊಬ್ಬರು ಅರಿಯ ಬೇಕು. ಇಂದಿನ ದಿನಗಳಲ್ಲಿ ದೇಶ ಭಯೋತ್ಪಾದಕರಿಂದ ತತ್ತರಗೊಳ್ಳುತ್ತಿದೆ. ಒಂದು ಕಡೆ ಭಯೋತ್ಪಾದನೆ, ಮತ್ತೊಂದಡೇ ದೇಶದ ಭದ್ರತೆಯ ಸಮಸ್ಯೆಗಳು, ಬೆಲೆ ಏರಿಕೆಯ ಬಿಸಿ ಇಂಥಹ ಸಂದಿಗ್ದ ಸಮಯದಲ್ಲಿ ದೇಶವನ್ನು ಮುನ್ನಡೆಸುವ ಏಕೈಕ ದುರೀಣ ಎಂದರೆ ಪ್ರಪಂಚದಲ್ಲೆಡೆ ಕೇಳಿ ಬರುತ್ತಿರುವ ಮಾತು ನರೇಂದ್ರ ಮೋದಿ. ನರೇಂದ್ರ ಮೋದಿ ಪ್ರಧಾನಿಯಾಗ ಬೇಕಾದರೆ ಚಿಕ್ಕಮಗಳೂರು- ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಇಲ್ಲಿಯ ಬಿಜೆಪಿ ಅಭ್ಯರ್ಥಿಗೆ ಮಲೆನಾಡು, ಬಯಲು ಸೀಮೇ ಮತ್ತು ಕರಾವಳಿ ಭಾಗದ ಜನರ ಕಷ್ಟಗಳ ಬಗ್ಗೆ ಸಂಪೂರ್ಣ ಅರಿವಿದೆ. ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದಲ್ಲಿ ಬೆಳೆಗಾರರ ಸಮಸ್ಯೆ, ಒತ್ತುವರಿ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಸ್ಪಂದಿಸಲಿರುವರು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಶಾಸಕ ಎಂ.ಪಿ. ಕುಮಾರ ಸ್ವಾಮಿ, ಎಂ.ಕೆ. ಪ್ರಾಣೇಶ್, ಎಂ.ಸಿ. ಸುದರ್ಶನ್, ವಿ.ಕೆ. ಶಿವೇಗೌಡ, ಪಂಚಾಕ್ಷರಿ, ಜೆ.ಎಸ್. ರಘು, ಸುನೀಲ್ ನಡಗೋಡು, ಬೋಜೇಗೌಡ, ಕಣಚೂರ್ ವಿನೋದ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement