ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗೃಹಿಣಿ ಆತ್ಮಹತ್ಯೆ

Rashmi Kasaragodu
Updated On : 31 Mar 2014, 2:01 am

ಮೂಡಿಗೆರೆ: ವರದಕ್ಷಿಣೆ ಕಿರುಕುಳ ತಾಳದೇ ಗೃಹಿಣಿ ದಿವ್ಯಾ (21) ಎಂಬವರು ಮನೆಯ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಛತ್ರಮೈದಾನದಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಕಣಿವೆದಾಸರಹಳ್ಳಿಯ ಚಂದ್ರಶೆಟ್ಟಿ ಎಂಬವರ ಪುತ್ರಿಯಾಗಿರುವ ದಿವ್ಯಾ ಅವರ ವಿವಾಹ ಕಳೆದ ಒಂದೂವರೆ ವರ್ಷದ ಹಿಂದೆ ಮೂಡಿಗೆರೆ ಛತ್ರಮೈದಾನದ ವಾಸಿ ನಾಗರಾಜ್ ಅವರ ಪುತ್ರ ನಂದೀಶ್ ಅವರೊಂದಿಗೆ ವಿವಾಹ ನೆರವೇರಿಸಲಾಗಿತ್ತು. ತವರು ಮನೆಯಿಂದ ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದರು. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಹೇಳಿರುವ ದಿವ್ಯಾ ಅವರ ತಂದೆ ಚಂದ್ರಶೆಟ್ಟಿ ಅವರು, ಅಳಿಯ ನಂದೀಶ, ದಿವ್ಯಾ ಅವರ ಮಾವ ನಾಗರಾಜ್ ಮತ್ತು ಸಂಬಂಧಿ ಸತೀಶ್ ಅವರ ಮೇಲೆ ಮೂಡಿಗೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ನಾಗರಾಜ್ ಮತ್ತು ಸತೀಶ್ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯಕ್ಕೆ ಕ್ರಮ ಜರುಗಿಸಲಾಗಿದೆ.
ಸ್ಥಳಕ್ಕೆ ತಹಸೀಲ್ದಾರ್ ಶಾರದಾಂಬ, ಡಿವೈಎಸ್ಪಿ ಎಚ್.ಕೆ. ರಮೇಶ್, ವೃತ್ತ ನಿರೀಕ್ಷಕ ಎಸ್.ಎಸ್. ಹಿರೇಮಠ್, ಠಾಣಾಧಿಕಾರಿ ಅನಂತ ಪದ್ಮನಾಭ್ ಆಗಮಿಸಿ ಸ್ಥಳ ಮಹಜರು ನಡೆಸಿ ತನಿಖೆ ನಡೆಸುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement