ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಂದೇವ್ ವಿರುದ್ಧ ಕೋರ್ಟಲ್ಲಿ ಪ್ರಕರಣ

Rashmi Kasaragodu
Updated On : 2 May 2014, 11:17 am

ಚಿಕ್ಕಮಗಳೂರು:  ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ಮೂಲಕ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಸ್ವಘೋಷಿತ ಬಾಬಾ ರಾಂದೇವ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಹೇಳಿದ್ದಾರೆ.
ಹಿರೇಮಗಳೂರಿನ ಬಸ್ ನಿಲ್ದಾಣದ ಬಳಿ ಹೊಯ್ಸಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಬುಧವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮೆರವಣಿಗೆಗೆ ಚಾಲನೆ ನೀಡಿದ ನಂತರ ಮುತ್ತಿನಮ್ಮ ದೇವಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಲಿತರಿಗೆ ನೋವುಂಟು ಮಾಡಿದ್ದಾರೆ. ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿರುವ ರಾಂದೇವ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಎಲ್ಲ ದಾಖಲೆಗಳೊಂದಿಗೆ ವಕೀಲರ ಜತೆಯಲ್ಲಿ ಮಾತುಕತೆ ನಡೆಸಿ ತಯಾರಿ ನಡೆಸಲಾಗಿದೆ ಎಂದು ಹೇಳಿದರು. ನಗರಸಭೆ ಮಾಜಿ ಸದಸ್ಯ ಜಾನಯ್ಯ ಮಾತನಾಡಿದರು.
 ಅಧ್ಯಕ್ಷತೆ ವಹಿಸಿದ್ದ ಸಂಘ ಅಧ್ಯಕ್ಷ ಎಚ್.ಪಿ. ಪ್ರದೀಪ್ ಮಾತನಾಡಿ, ಮುಂದಿನ ವರ್ಷ ಅಂಬೇಡ್ಕರ್ ಜಯಂತಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದರು.
ಸಂಘದ ಕಾರ್ಯದರ್ಶಿ ಹೇಮಂತ್, ಸಹ ಕಾರ್ಯದರ್ಶಿ ಯುವರಾಜ, ಖಜಾಂಚಿ ಪುರುಷೋತ್ತಮ, ಕ್ರೀಡಾ ಕಾರ್ಯದರ್ಶಿ ಯೋಗೀಶ, ಪದಾಧಿಕಾರಿಗಳಾದ ಸುನೀಲ್‌ಕುಮಾರ್, ವಸಂತಕುಮಾರ್, ಶಿವಪ್ರಸಾದ್, ಗ್ರಾಮದ ಮುಖಂಡರಾದ ರಂಗಯ್ಯ, ರುದ್ರಯ್ಯ, ಎಚ್.ಕೆ. ಸೋಮಶೇಖರ್, ಎಸ್.ಎನ್. ಸೋಮಶೇಖರ್, ರಂಜಿತ್ ಭಾಗವಹಿಸಿದ್ದರು.
ಕಾಲೋನಿಯ ಮುಖ್ಯ ಬೀದಿಯಲ್ಲಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ಶಿವು ಸ್ವಾಗತಿಸಿ, ವಂದಿಸಿದರು. ಹಲವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement