ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಂಕರ ಜಯಂತಿ ವಿಶೇಷ ಉಪನ್ಯಾಸ

Rashmi Kasaragodu
Updated On : 2 May 2014, 11:20 am

ತರೀಕೆರೆ: ಮೂರು ಲೋಕದಲ್ಲಿ ಗುರುವಿಗೆ ಸಮಾನವಾದುದು ಯಾವುದೂ ಇಲ್ಲ ಎಂದು ಬೆಂಗಳೂರು ಎಂ.ಇ.ಎಸ್. ಕಾಲೇಜು ನಿವೃತ್ತ ಪ್ರಾಚಾರ್ಯ ಡಾ.ಬಿ.ಎಸ್. ರಾಮಕೃಷ್ಣ ತಿಳಿಸಿದ್ದಾರೆ.
ಅವರು, ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಪಟ್ಟಣದ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಶಂಕರ ಜಯಂತಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಗುರು ತತ್ವ ವಿಚಾರ ಕುರಿತು ಮಾತನಾಡಿದರು.
ತತ್ವವನ್ನು ಆಚರಣೆಯಲ್ಲಿ ತರುವವರೇ ಗುರು, ತಾನೂ ಕಲಿತು ಇನ್ನೊಬ್ಬನನ್ನು ಕಲಿಸಲು ಅರ್ಹನೋ ಆತನೇ ಗುರು ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಬಗ್ಗೆ ಇರುವ ಗೌರವ, ಶಂಕರರ ಗುರು ಕಾರುಣ್ಯ, ಗುರು ಮಾರ್ಗದರ್ಶನ ಸ್ತುತಿ ಮತ್ತು ಆವರ ಆದರ್ಶಗಳು ಆನುಕರಣಿಯ ಎಂದು ತಿಳಿಸಿದ ಅವರು, ಶಂಕರ ಕಾವ್ಯ ಶೈಲಿಯ ರಚನಾ ವೈಭವ, ಶಿವಾನಂದ ಲಹರಿ ಮತ್ತು ಸಂಸ್ಕೃತ ಭಾಷಾ ಸೊಗಡನ್ನು ವಿವರಿಸಿದರು.
ಶಂಕರ ವಿರಚಿತ ಶಿವಾನಂದ ಲಹರಿ ರಚನೆ, ಶ್ರೀಶೈಲ ಮಲ್ಲಿಕಾರ್ಜುನ ಸ್ತುತಿ, ಅದರ ಸುಂದರ ಕಾವ್ಯ ಶೈಲಿ, ಶಿವನ ಸುಂದರ ಸ್ವರೂಪದ ಬಗ್ಗೆ ಅವರು ಪ್ರವಚನ ಮಾಡಿದರು. ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀವತ್ಸ ಭಜನಾ ಮಂಡಳಿ ಸದಸ್ಯರಿಂದ ಸೌಂದರ್ಯ ಲಹರಿ ಪಾರಾಯಣ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement