ಶಂಕರಾಚಾರ್ಯರ ಜಯಂತಿ ಇಂದಿನಿಂದ
ಚಿಕ್ಕಮಗಳೂರು: ಶ್ರೀ ಜಗದ್ಗುರು ಶಂಕರಾಚಾರ್ಯರ ಜಯಂತಿ ಮಹೋತ್ಸವ ಮತ್ತು ತತ್ವಜ್ಞಾನಿಗಳ ದಿನಾಚರಣೆಯನ್ನು ಮೇ 2 ರಿಂದ 4ರ ವರೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಶೃಂಗೇರಿ ಶ್ರೀ ಶಂಕರಮಠ, ಬ್ರಾಹ್ಮಣ ಮಹಾಸಭಾ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೇ 2ರಂದು ಬೆಳಗ್ಗೆ 9 ಗಂಟೆಗೆ ಜಯಂತಿ ಪ್ರಯುಕ್ತ ರುದ್ರಾಭಿಷೇಕ, ವಿಶೇಷ ಪೂಜೆ, 12 ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 6ಕ್ಕೆ ಶಂಕರ ವಿಜಯ ಕಾವ್ಯವಾಚನ ಚಂದ್ರಮೌಳಿ ಮತ್ತು ನಾಗಶ್ರೀ ಯವರಿಂದ ನಡೆಯಲಿದ್ದು, ಅನಂತರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು, ಗಿರಿಜಾ ರಾಮಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮೇ 4ರಂದು ಸಂಜೆ 6 ಗಂಟೆಗೆ ಗಾಯತ್ರಿ ಮಹಿಳಾ ಮಂಡಳಿ ವತಿಯಿಂದ ಶ್ರೀ ಶಂಕರರ ಸ್ತೋತ್ರಾವಳಿ ನಡೆಯಲಿದ್ದು, ನಾಗರತ್ನಮ್ಮ ಅಧ್ಯಕ್ಷತೆ ವಹಿಸಲಿದ್ದು, ಬನಶಂಕರಿ ಜೋಷಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.