ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜೇಗೌಡ ಸಾಂತ್ವನ
ಕ.ಪ್ರ.ವಾರ್ತೆ, ಕೊಪ್ಪ, ಮೇ 2
ತಾಲೂಕಿನ ಹರಿಹರಪುರ ಘಾಟಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಭೇಟಿ ನೀಡಿ ಸಾಂತ್ವನ ಹೇಳಿದರು.
ಅಪಘಾತದಲ್ಲಿ ಕೌರಿಯ ಕೃಷಿ ಕಾರ್ಮಿಕ ಲೋಕೇಶ್ ಪುತ್ರಿ ಸಿಂಚನಾ (8), ಪೇಂಟರ್ ಶ್ರೀಧರ್ ಹಾಗೂ ಗಿರೀಶ್ ಮೃತಪಟ್ಟಿದ್ದರು. ಗಿರೀಶ್ ತಾಯಿ ಸರೋಜಮ್ಮ ತಮ್ಮ ಪುತ್ರ ಆಕರ್ಷಕ ಗೋಡೆ ವಿನ್ಯಾಸಗಳನ್ನು ಬಿಡಿಸುತ್ತಿದ್ದುದನ್ನು ಸ್ಮರಿಸಿ ಕಣ್ಣಿರೀಟ್ಟರು.
ಕಾಂಗ್ರೆಸ್ ಮುಖಂಡ ಟಿ.ಡಿ. ರಾಜೇಗೌಡ ವೈಯಕ್ತಿಕವಾಗಿ ದುಃಖತಪ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್ ಉಪಾಧ್ಯಕ್ಷ ಓಣಿತೋಟ ರತ್ನಾಕರ್, ಜಿ.ಪಂ. ಮಾಜಿ ಉಪಾಧ್ಯಕ್ಷ ನಾಗೇಶ್ ಪಾಲಚಂದ್ರ ಮೊದಲಾದವರಿದ್ದರು.