'ನವೀನ್ ನಾಯ್ಕ ಮೇಲಿನ ಪ್ರಕರಣ ಹಿಂಪಡೆಯಲಿ'
ಮೂಡಿಗೆರೆ: ಕಬೀರ್ ಕುಟುಂಬಕ್ಕೆ ಘೋಷಿರುವ ಪರಿಹಾರ ಹಾಗೂ ಎಎನ್‌ಎಫ್ ಯೋಧ ನವೀನ್ ನಾಯ್ಕ ಮೇಲೆ ದಾಖಲಿಸಿರುವ ಕೊಲೆ ಪ್ರಕರಣವನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ಕೆ.ಎಸ್. ವಿನೋದ್ ಕಣಚೂರು ಮಾತನಾಡಿ, ಕಾಂಗ್ರೆಸ್ ಆಡಳಿತದ ಪರಿಣಾಮ ದೇಶದಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿದೆ. ದನಗಳ್ಳ, ದರೋಡೆಕೋರನನ್ನು ಕೊಂದ ಯೋಧನ ಮೇಲೆ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿರುವ ಸರ್ಕಾರ, ಕಳ್ಳ ಕಬೀರ್ ಮುಸ್ಲಿಂ ಎನ್ನುವ ಕಾರಣದಿಂದ ಆತನ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಬಿಜೆಪಿ ಮುಖಂಡ ಎಂ.ವಿ. ಜಗದೀಶ್ ಮಾತನಾಡಿದರು. ಇದಕ್ಕೂ ಮುನ್ನ ಪ್ರವಾಸಿ ಮಂದಿರದ ಆವರಣದಿಂದ ಹೊರಟ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲಯನ್ಸ್ ವೃತ್ತದ ಬಳಿ ಬಹಿರಂಗ ಸಭೆ ನಡೆಸಿದರು.
ಬಳಿಕ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ತಹಸಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸುದರ್ಶನ್, ಯುವ ಮೋರ್ಚಾ ಅಧ್ಯಕ್ಷ ಸುನೀಲ್ ನಿಡಗೋಡು, ಬಜರಂಗದಳದ ಸುದೈವ್, ಸಂತೋಷ್ ಕುಂಬರಡಿ, ಪರೀಕ್ಷಿತ್, ಭರತ್ ಮುದ್ರೇಮನೆ, ಪಪಂ ಸದಸ್ಯೆ ಲತಾ ಲಕ್ಷ್ಮಣ್, ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಹುಲ್ಲೇಮನೆ ಚಂದ್ರು, ಗಿರೀಶ್ ಹಳ್ಳಿಬೈಲು, ರಾಮೇಗೌಡ, ಪುರುಷೋತ್ತಮ್, ಸಂದರ್ಶ ಹ್ಯಾರಗುಡ್ಡೆ ಮತ್ತಿತರರಿದ್ದರು.