ಕೈ ಕೊಟ್ಟ ಇಂಟರ್ನೆಟ್: ಪರದಾಟ
ನರಸಿಂಹರಾಜಪುರ: ಇಲ್ಲಿನ ಎಸ್ಬಿಎಂ ಬ್ಯಾಂಕ್ನಲ್ಲಿ ಇಂಟರ್ನೆಟ್ ಕೈಕೊಟ್ಟಿದ್ದರಿಂದ ಬ್ಯಾಂಕಿನ ವ್ಯವಹಾರ ಸ್ಥಗಿತಗೊಂಡು ಗ್ರಾಹಕರು ತೊಂದರೆ ಅನುಭವಿಸಬೇಕಾಯಿತು. ಬುಧವಾರ ಬೆಳಗ್ಗೆಯಿಂದಲೇ ಬ್ಯಾಂಕಿನಲ್ಲಿ ಇಂಟರ್ನೆಟ್ಟ್ ಸಮಸ್ಯೆ ಉಂಟಾಗಿದ್ದು, ಗ್ರಾಹಕರು ಮಧ್ಯಾಹ್ನದವರೆಗೂ ವ್ಯವಹಾರ ಮಾಡಲು ಸಾಧ್ಯವಾಗಿರಲಿಲ್ಲ. ಮಧ್ಯಾಹ್ನ 3ರ ನಂತರ ಇಂಟರ್ನೆಟ್ ವ್ಯವಸ್ಥೆ ಸರಿಯಾಗಿದ್ದು, ನಂತರ ವ್ಯವಹಾರ ಮುಂದುವರಿಸಲಾಯಿತು. ಗುರುವಾರ ಕಾರ್ಮಿಕರ ದಿನಾಚರಣೆ ಹಾಗೂ ಶುಕ್ರವಾರ ಬಸವ ಜಯಂತಿ ಪ್ರಯುಕ್ತ ಬ್ಯಾಂಕಿಗೆ ರಜೆಯಿತ್ತು. ಶನಿವಾರ ಗ್ರಾಹಕರು ಬ್ಯಾಂಕಿಗೆ ಬಂದರೆ ಮತ್ತೆ ಇದೇ ಸಮಸ್ಯೆ ಮುಂದುವರಿದಿದ್ದು, ಮಧ್ಯಾಹ್ನದವರೆಗೂ ಬಿಎಸ್ಎನ್ಎಲ್ ಅಧಿಕಾರಿಗಳು ಪ್ರಯತ್ನಪಟ್ಟರೂ ಸರಿಯಾಗಲಿಲ್ಲ. ಶನಿವಾರ ಬ್ಯಾಂಕಿಗೆ ಅರ್ಧ ದಿನ ಮಾತ್ರ ವ್ಯವಹಾರ ಇದ್ದು, ಮಧ್ಯಾಹ್ನದ ನಂತರ ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಲಾಗುತ್ತದೆ. ಭಾನುವಾರ ಬ್ಯಾಂಕಿಗೆ ರಜೆ. ಇದರಿಂದ ಎಸ್ಬಿಎಂ ಗ್ರಾಹಕರು ಪರದಾಡುವಂತಾಯಿತು.
ಗೋಪುರ, ಮಹಾದ್ವಾರ ಉದ್ಘಾಟನೆ
ಚಿಕ್ಕಮಗಳೂರು: ನಗರದ ನಾರಾಯಣಪುರ ಬಡಾವಣೆಯ ಶ್ರೀಆದಿಶಕ್ತಿ ಮಾರಿಯಮ್ಮ ದೇವಸ್ಥಾನದ ಮಹಾದ್ವಾರ, ಗರ್ಭಗುಡಿ ಗೋಪುರಗಳ ಉದ್ಘಾಟನೆ ಶುಕ್ರವಾರ ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿಯಿಂದ ಗಂಗೆಯನ್ನು ತಂದು ಹೋಮ, ಕಳಸಪೂಜೆ ನಡೆಸುವ ಮೂಲಕ ವಿಧಿವಿಧಾನಗಳ ಅನುಸಾರ ಪ್ರಾರಂಭಿಸಲಾಯಿತು. ಶನಿವಾರ ಬೆಳಗ್ಗೆ 6 ಗಂಟೆಗೆ ಮಹಾದ್ವಾರ, ಗರ್ಭಗುಡಿ ಗೋಪುರಗಳ ಕಳಸ ಸ್ಥಾಪನೆ ನೆರವೇರಿತು. ನಂತರ ಮುತ್ತೈದೆಯರು ಗಂಗೆಯನ್ನು ಸಮರ್ಪಿಸಿದರು. ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ಸಮಿತಿಯ ಚಿನ್ನಪ್ಪ, ಗುಣ, ವೆಂಕಟೇಶ್, ಜಯಣ್ಣ, ಮೂರ್ತಿ ಇದ್ದರು.
ಮಹಿಳಾ ಸರ್ಕಾರಿ ಕಾಲೇಜು ಪ್ರಾರಂಭ
ಚಿಕ್ಕಮಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಬೇಲೂರು ರಸ್ತೆಯ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸದಾಗಿ ಪ್ರಾರಂಭವಾಗಲಿದೆ. ಬಿಎ, ಬಿಬಿಎಂ, ಬಿಕಾಂ ತರಗತಿಗಳಿಗೆ ಪ್ರವೇಶವಿದೆ. ಮೇ 2ನೇ ವಾರದಿಂದ ಪ್ರವೇಶ ಅರ್ಜಿ ವಿತರಿಸಲಾಗುವುದು. ಮಾಹಿತಿಗಾಗಿ ಕಾಲೇಜಿನ ನೋಡೆಲ್ ಅಧಿಕಾರಿ ಡಾ.ಎಸ್.ಆರ್. ವೈದ್ಯಾ, (94484 21949) ಇವರನ್ನು ಸಂಪಸಿ.