ಬಸವ ನಾಮ ಸ್ಮರಣೆ ಪುಣ್ಯದ ಕಾರ್ಯ
ಚಿಕ್ಕಮಗಳೂರು: ಬಸವಣ್ಣನವರು ಸಾರಿದ ಆದರ್ಶಗಳು ಮಾನವ ಕುಲಕ್ಕೆ ಎಂದೆಂದಿಗೂ ಅಮೂಲ್ಯವಾದ ಗುಣಗಳಾಗಿದ್ದು, ಬಸವಣ್ಣನವರ ನಾಮಸ್ಮರಣೆ ಮಾಡುವುದೇ ಒಂದು ಪುಣ್ಯದ ಕೆಲಸ ಎಂದು ವರ್ತಕರ ಸಂಘದ ಅಧ್ಯಕ್ಷ ದಿನೇಶ್ ಗುಪ್ತ ಹೇಳಿದ್ದಾರೆ. ನಗರದ ಎಂ.ಜಿ. ರಸ್ತೆಯಲ್ಲಿರುವ ಬಸವಣ್ಣನವರ ಗುಡಿಯಲ್ಲಿ ಬಸವಜಯಂತಿ ಪ್ರಯುಕ್ತ ವಾಸವಿ ಯುವಜನ ಸಂಘದ ವತಿಯಿಂದ ಬಸವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ನಂತರ ಮಾತನಾಡಿದರು. ಬಸವಣ್ಣನವರು ಸಾರಿದ ಸಾಮಾಜಿಕ ಕ್ರಾಂತಿಯ ಅಂಶಗಳು ಇಂದಿಗೂ ಪ್ರಸ್ತುತವಾಗಿದ್ದು, ಜಾತಿ ವ್ಯವಸ್ಥೆಯ ಪಿಡುಗನ್ನು ಹೋಗಲಾಡಿಸಲು ಶ್ರೀ ಬಸವೇಶ್ವರರು ನಡೆಸಿದ ಹೋರಾಟ ಅವಿಸ್ಮರಣೀಯ ಎಂದರು. ಪ್ರತಿಯೊಬ್ಬ ವ್ಯಕ್ತಿಯಿಂದಲೂ ಇತರರು ಕಲಿಯುವಂತದ್ದನ್ನು ಗುರುತಿಸಬೇಕು. ವರ್ಣಭೇದ ಮರೆತು ಬದುಕುವ ಹಾದಿಯನ್ನು ಮುಂದಿನ ಪೀಳಿಗೆಗಾಗಿ ಸಿದ್ಧಪಡಿಸಲು ನಾವು ಮುಂದಾಗಬೇಕಾಗಿದೆ ಎಂದು ತಿಳಿಸಿದರು. ಸತ್ಯನಾರಾಯಣ, ನಿತಿನ್, ರಮೇಶ್, ಮದನ್, ಆರ್.ವಿ. ರಘುನಂದನ್, ರಾಮಕೃಷ್ಣ, ಎನ್.ಯು. ದೀಪಕ್ ಉಪಸ್ಥಿತರಿದ್ದರು.
ಸಿದ್ಧಿವಿನಾಯಕ ರಥೋತ್ಸವ
ಹೊಸನಗರ: ತಾಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಕಾರಣಗಿರಿ ಸಿದ್ಧಿವಿನಾಯಕ ದೇವರ ಮಹಾರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು. ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತರು ಮಧ್ಯಾಹ್ನ ವಿಶೇಷ ಪೂಜೆಯಲ್ಲಿ ಭಾಗವಹಿಸಿ ನಂತರ ರಥ ಎಳೆದು ಧನ್ಯತಾಭಾವ ಮೆರೆದರು. ಸಂಜೆ ದೇವಸ್ಥಾನದ ಆವರಣದಿಂದ ಹೊರಟ ರಥ ರಾಮಚಂದ್ರಾಪುರ ರಸ್ತೆಯ ವೃತ್ತದವರೆಗೆ ಆಗಮಿಸಿತು. ಈ ಸಂದರ್ಭ ಸಾರ್ವಜನಿಕರ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. ರಥೋತ್ಸವ ಅಂಗವಾಗಿ ಬುಧವಾರದಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಶುಕ್ರವಾರ ರಜತ ರಥೋತ್ಸವ ಸಂಪನ್ನಗೊಂಡಿತ್ತು. 1008 ನಾರೀಕೇಳ ಗಣಹೋಮ ನಡೆಯಿತು. ಇದಕ್ಕೂ ಮುನ್ನ ಪ್ರತಿ ವರ್ಷದಂತೆ ಹೆದ್ಲಿ, ಹನಿಯ, ನೆಲ್ಲುಂಡೆಗಳಲ್ಲಿ ಗಣಪತಿ ಉತ್ಸವ ನಡೆಯಿತು. ರಾತ್ರಿ ಮಾರುತಿಪುರ ಶ್ರೀರಾಮಾರ್ಪಣ ಕಲಾ ವೇದಿಕೆ ಅವರಿಂದ “AÒ¡OÚ ®ÚÈÚ%’ ಯಕ್ಷಗಾನ ಬಯಲಾಟ ಪ್ರೇಕ್ಷಕರ ಮನರಂಜಿಸಿತು.