ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಂಕರಾಚಾರ್ಯರ ದಿನ ತತ್ವಜ್ಞಾನಿಗಳ ದಿನವಾಗಲಿ

Rashmi Kasaragodu
Updated On : 5 May 2014, 11:59 am

ಶೃಂಗೇರಿ: ದೇಶ ಕಂಡ ಮಹಾನ್ ದಾರ್ಶನಿಕ ಶ್ರೀ ಶಂಕರಾಚಾರ್ಯರ ಜಯಂತಿಯ್ನು ತತ್ವಜ್ಞಾನಿಗಳ ದಿನಚಾರಣೆಯಾಗಿ ರಜೆ ರಹಿತವಾಗಿ ಆಚರಿಸಬೇಕೆಂದು ಪ್ರಜಾಪ್ರಭುತ್ವ ಉಳಿಸಿ ಹೋರಾಟ ಆಂದೋಲನದ ನಾಗೇಶ್ ಅಂಗಿರಸ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಹಿಂದೆ ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ಸನಾತನ ಧರ್ಮಾನುಯಾಯಿಗಳ ಒತ್ತಾಯದ ಮೆರೆಗೆ ಶ್ರೀ ಶಂಕರ ಜಯಂತಿ ದಿನ ತತ್ವಜ್ಞಾನಗಳ ದಿನವನ್ನಾಗಿ ಆಚರಿಸಬೇಕೇಂದು 5-3-2003ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶ ಹೊರಬಿದ್ದ 9 ವರ್ಷಗಳ ನಂತರ ಧಾರವಾಡದಲ್ಲಿ 7-5-2012ರಂದು ಜಿಲ್ಲಾಡಳಿತ ಮಾದರಿ ಕಾರ್ಯಕ್ರಮವಾಗಿ ಆಚರಿಸಿತು. ನಂತರದ ದಿನಗಳಲ್ಲಿ ಸರ್ಕಾರ ಈ ಉತ್ಸಾಹ ತೋರಲಿಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮದ್ವಾಚಾರ್ಯರ ಭವನ ನಿರ್ಮಿಸಬೇಕು. ಜಿಲ್ಲಾ ಕೇಂದ್ರಗಳಲ್ಲಿ ತತ್ವಜ್ಞಾನಗಳ ದಿನಾಚರಣೆಯನ್ನು ರಜೆ ರಹಿತವಾಗಿ ಆಚರಿಸಿ ತತ್ವಜ್ಞಾನಗಳ ಪರಿಚಯ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಧಾರ್ಮಿಕ ಸಂಸ್ಥೆಗಳು, ಮಠಮಾನ್ಯಗಳು ಸರ್ಕಾರವನ್ನು ಒತ್ತಾಯಿಸಬೇಕು. ಸರ್ಕಾರ ಈ ಮನವಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement