ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಉಸ್ತುವಾರಿ ಸಚಿವ ಜೈನ್ ವಿರುದ್ಧ ಪ್ರತಿಭಟನೆ

Rashmi Kasaragodu
Updated On : 6 May 2014, 11:19 am

ಕ.ಪ್ರ.ವಾರ್ತೆ    ಮೂಡಿಗೆರೆ    ಮೇ 5
ದಿನಪತ್ರಿಕೆಯೊಂದರ ವರದಿಗಾರರೊಬ್ಬರಿಗೆ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಇತ್ತೀಚೆಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿ ತಾಲೂಕು ಪತ್ರಕರ್ತರ ಸಂಘವು ಸೋಮವಾರ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಇತ್ತೀಚೆಗೆ ಬಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಕುರಿತು ದಿನಪತ್ರಿಕೆಯೊಂದರಲ್ಲಿ ಮೂಡುಬಿದ್ರೆಯ ವರದಿಗಾರ ವರದಿ ಮಾಡುವ ಮೂಲಕ ಜನರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರಜೈನ್ ಆ ವರದಿಗಾರನಿಗೆ ದೂರವಾಣಿ ಮೂಲಕ ಬೆದರಿಕೆ ಒಡ್ಡಿರುವುದು ಮೂಡಿಗೆರೆ ತಾಲೂಕು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ನಾಲ್ಕನೇ ಸ್ತಂಭ: ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗ ನಾಲ್ಕನೇ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮಾಜ ಪರಿವರ್ತನೆ ಮಾಡುತ್ತಿರುವ ಪತ್ರಿಕಾ ಸ್ವಾತಂತ್ರ್ಯಕ್ಕೆ ಹಿಂದಿನಿಂದಲೂ ಕೆಲ ಹಿತಾಸಕ್ತಿಗಳು ದಕ್ಕೆಯನ್ನುಂಟು ಮಾಡುತ್ತಿವೆ. ಇದೇ ರೀತಿಯಲ್ಲಿ ಇತ್ತೀಚೆಗೆ ಸಚಿವ ಅಭಯಚಂದ್ರ ಜೈನ್ವ್ ವರದಿಗಾರನಿಗೆ ಬೆದರಿಕೆ ಹಾಕಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಸಚಿವ ಸ್ಥಾನದಲ್ಲಿರುವವರು ಈ ರೀತಿ ವರದಿಗಾರನ ಮೇಲೆ ಬೆದರಿಕೆ ಹಾಕಿರುವುದು ಅವರಿಗೆ ಶೋಭೆ ತರುವ ಸಂಗತಿಯಲ್ಲ. ಮುಖ್ಯಮಂತ್ರಿಗಳು ಇಂತಹ ಘಟನೆ ಮರುಕಳಿಸದಂತೆ ಗಂಭೀರವಾಗಿ ಪರಿಗಣಿಸಿ ಅಭಯಚಂದ್ರಜೈನ್ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಜೊತೆಗೆ ಅವರು ವರದಿಗಾರರೊಂದಿಗೆ ಕ್ಷಮೆ ಯಾಚಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂಘದ ಅಧ್ಯಕ್ಷ ಉಮಾಶಂಕರ್, ಮಾಜಿ ಅಧ್ಯಕ್ಷ ಉದಯಶಂಕರ್, ಕಾರ್ಯದರ್ಶಿ ನಯನ್ ತಳವಾರ್, ಸದಸ್ಯ ಶಿವಕಾಶಿ, ಆನಂದ್ ಕಣಚೂರು, ಪ್ರಸನ್ನಕುಮಾರ್, ಸೋಮಶೇಖರ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement