ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾನೂನು ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ: ಎಚ್ಚರಿಕೆ

Rashmi Kasaragodu
Updated On : 6 May 2014, 11:19 am

ಕ.ಪ್ರ.ವಾರ್ತೆ    ಮೂಡಿಗೆರೆ    ಮೇ 5
ಕೆಲವು ಆಟೋರಿಕ್ಷಾಗಳಲ್ಲಿ ಸಮವಸ್ತ್ರ ಧರಿಸದೇ, ಪರಾವಾನಗಿ ಇಲ್ಲದೇ ಅಧಿಕ ಜನರನ್ನು ತುಂಬಿಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹವರ ಮೇಲೆ ಕಾನೂನು ರಿತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಮೂಡಿಗೆರೆ ಠಾಣಾಧಿಕಾರಿ ಅನಂತ ಪದ್ಮನಾಭ ಆಟೋ ಚಾಲಕರನ್ನು ಎಚ್ಚರಿಸಿದರು.
ಪೊಲೀಸ್ ಠಾಣೇಯಲ್ಲಿ ಅಧಿಕ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ಆಟೋಗಳನ್ನು ವಶಪಡಿಸಿಕೊಂಡ  ಅವರು, ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರನ್ನು ಹಾಗೂ ಸಂಘದ ಪಧಾಧಿಕಾರಿಗಳ ಸಭೆ ಕರೆದು ಮಾತನಾಡಿದ್ರು.
ಕೆಲವು ಚಾಲಕರು ಮನಸ್ಸಿಗೆ ತೋಚಿದಂತೆ ಆಟೋ ಚಲಾಯಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಪ್ರತಿಯೊಬ್ಬರೂ ಕಾನೂನು ಪಾಲಿಸಬೇಕು. ಮೂಡಿಗೆರೆ ತಾಲೂಕು ಮಲೆನಾಡು ಪ್ರದೇಶವಾಗಿದ್ದು, ಗುಡ್ಡಗಾಡಿನಿಂದ ಕೂಡಿದ್ದಾಗಿದೆ. ಹೆಚ್ಚಿಗೆ ಜನರನ್ನು ತುಂಬಿಕೊಂಡು ಹೋಗುವಾಗ ಅಪಘಾತ ಉಂಟಾದರೆ ಯಾವುದೇ ವಿಮೆ ಸಿಗುವುದಿಲ್ಲ. ಆದ್ದರಿಂದ ಕಾನೂನನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ತಾವಾಗಲಿ ತಮ್ಮ ಸಿಬ್ಬಂದಿಯಾಗಲೀ. ದಾಖಲಾತಿ ಕೇಳಿದರೆ ಅದನ್ನು ತಮ್ಮ ವಾಹನದಲ್ಲೇ ಕಡ್ಡಾಯವಾಗಿ ಇಟ್ಟುಕೊಂಡಿದ್ದು, ಅದನ್ನು ತೋರಿಸುವಂತೆ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement