ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭರವಸೆ ಈಡೇರಿಕೆಯೇ ಮುಖ್ಯ ಗುರಿ

Mainashree
Updated On : 7 May 2014, 10:50 am

ಚಿಕ್ಕಮಗಳೂರು: ಮುಂಬರುವ ಲೋಕಸಭಾ ಚುನಾವಣೆ ಫಲಿತಾಂಶ ಯಾವುದೇ ಆದರು ಕಾರ್ಯಕರ್ತರು, ಮತದಾರರಿಗೆ ಕೊಟ್ಟ ಭರವಸೆ ಈಡೇರಿಸುವುದೇ ನನ್ನ ಮುಖ್ಯ ಗುರಿ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಪಾಂಚಜನ್ಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಲೋಕಸಭಾ ಚುನಾವಣೆ ಸಂಬಂಧ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತೆ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ಜನರಿಗೆ ವೈಯುಕ್ತಿಕವಾಗಿ ಎಷ್ಟು ಸಹಾಯ ಮಾಡಲು ಸಾಧ್ಯವಾಗುತ್ತದೊ ತಿಳಿದಿಲ್ಲ. ಆದರೆ, ಊರಿನ ಅಭಿವೃದ್ಧಿ ಮತ್ತು ಸಾರ್ವಜನಿಕವಾಗಿ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕಾರ್ಯಕರ್ತರು ಆಶ್ವಾಸನೆ ಕೊಟ್ಟ ಕೆಲಸಗಳನ್ನು ಬಗೆಹರಿಸಲು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡಿ ನ್ಯಾಯಾ ಕೊಡಿಸುವುದಾಗಿ ತಿಳಿಸಿದ ಅವರು, ಕ್ಷೇತ್ರಕ್ಕೆ ಸಂಸದರಾಗಿ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದರು.
ಗೆಲವಿನ ವಿಶ್ವಾಸವಿದೆ: ನಾನು ಅಭ್ಯರ್ಥಿಯಾದಾಗ ಕೇವಲ 31 ದಿನ ಮಾತ್ರ ಸಮಯವಿತ್ತು, ದೊಡ್ಡ  ಕ್ಷೇತ್ರ ಎಂಬ ಭಯ ಕಾಡುತ್ತ ಎಲ್ಲ ಮತದಾರರನ್ನು ತಲುಪಲು ಸಾಧ್ಯವೇ  ಎಂಬ ಅಳುಕಿತ್ತು, ಆದರೆ, ಕಾರ್ಯಕರ್ತರ ಉತ್ಸಾಹ, ಹುರುಪಿನಿಂದ ನೀವೆ ಮೋದಿಯಾಗಿ ಮತ್ತು ನೀವೆ ಶೋಭಾ ಎಂದು ಕೆಲಸ ಮಾಡಿದ ಫಲವಾಗಿ ಗ್ರಾಮ ಪಂಚಾಯಿತಿಗಳಿಂದ ಪುರಸಭೆವರೆಗೆಗಿನ ಮತದಾತರರ ಬಳಿ ತನಕ ಮುಟ್ಟಲು ಕಾರಣವಾಗಿ ಗೆಲುವಿನ ವಿಶ್ವಾಸ ಮೂಡಿಸಿದೆ ಎಂದರು.
ಸರ್ಕಾರದ ಇಬ್ಬಗೆ ನೀತಿ: ರಾಜ್ಯದಲ್ಲಿ ರಕ್ಷಣಾ ವ್ಯವಸ್ಥೆ ಕುಗ್ಗಿಸುವ ಹಿನ್ನೆಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಬಂಡೆ ಮತ್ತು ಶೃಂಗೇರಿ ಪ್ರಕರಣಗಳಲ್ಲಿ ಇಬ್ಬಗೆ ನೀತಿ ಅನುಸರಿಸಿರುವುದೇ ಕಾಂಗ್ರೆಸ್ ಪಕ್ಷದ ಓಟ್‌ಬ್ಯಾಂಕ್ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ. ಈ ಮೂಲಕ ಒಂದು ಸಮುದಾಯವನ್ನು ಮೆಚ್ಚಿಸುವ ಕುತಂತ್ರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಸಚಿವೆಯಾಗುವ ದುರಾಸೆ ನನಗಿಲ್ಲ: ಕ್ಷೇತ್ರದ ಸಮಸ್ಯೆ ಬಗೆಹರಿಸಿ ಜನರ ಕೆಲಸ ಮಾಡಲು ಸಂಸದರಾಗಿದ್ದಾಗ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದರೆ ಆನೆ ಬಲ ಬಂದ ಹಾಗೆ, ಪಟ್ಟು ಹಿಡಿದು ಕೆಲಸ ಮಾಡಿಸುತ್ತೇನೆ. ಅತ್ಯಂತ ಉತ್ತಮ ಎಂಪಿಯಾಗುವ ಕನಸಿದೆಯೇ ಹೊರತು ಮಂತ್ರಿಯಾಗುವ ದುರಾಸೆ ಇಲ್ಲ ಎಂದು ತಿಳಿಸಿದರು.
ಇತ್ತೀಚೆಗೆ ನಿಧನರಾದ ನಗರಸಭೆ ಸದಸ್ಯ ಎಲ್.ಕೆ. ರಮೇಶ್ ಮತ್ತು ಗ್ರಾ.ಪಂ. ಸದಸ್ಯ ನಾಗರಾಜ್ ಅವರ ಆತ್ಮಕ್ಕೆ ಶಾಂತಿಕೋರಿ ಮೌನಾಚರಿಸಲಾಯಿತು.
ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್, ಉಪಾಧ್ಯಕ್ಷ ಅಫ್ಸರ್ ಅಹಮದ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಸದಸ್ಯರಾದ ಜೆ.ಡಿ. ಲೋಕೇಶ್, ಭಾಗ್ಯ ರಂಗನಾಥ್, ನಾಗರಾಜ್, ಮುಖಂಡರಾದ ಭೋಜೇಗೌಡ, ಮಂಜುನಾಥ್, ರಂಗನಾಥ್, ದೇವನೂರು ರವಿ, ನಿಂಗೇಗೌಡ, ಹೆಚ್.ಎಸ್. ಪುಟ್ಟೇಗೌಡ, ಮಹಮದ್ ಅನ್ವರ್, ಟಿ. ರಾಜಶೇಖರ್, ಸೀತರಾಂ ಭರಣ್ಯ, ದೇವರಾಜಶೆಟ್ಟಿ, ರಾಜಪ್ಪ, ಶ್ರೀನಿವಾಸ್, ಲೋಕೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement