ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ
ತರೀಕೆರೆ: ಅಲ್ಪಸಂಖ್ಯಾತರು ಸರ್ಕಾರ ನೀಡುವ ವಿವಿಧ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.
ಅವರು, ಹಜರತ್ ಕಂಬಲಿವಾಲೆ ಫೀರ್ ದರ್ಗಾ ವತಿಯಿಂದ ಸಜ್ಜತ್ ಕಾಲೋನಿಯಲ್ಲಿ ಏರ್ಪಡಿಸಲಾಗಿದ್ದ ಉರುಸ್ನಲ್ಲಿ ಮಾತನಾಡಿದರು.
ಅಲ್ಪಸಂಖ್ಯಾತರ ನಿಗಮದಿಂದ ಟ್ಯಾಕ್ಸಿ ಖರೀದಿಸಲು, ಜಮೀನಿಗೆ ಬೋರ್ವೆಲ್ ತೋಡಿಸಲು ಇತ್ಯಾದಿ ಅನೇಕ ರೀತಿಯ ಸಾಲ ಸೌಲಭ್ಯಗಳನ್ನು ಕೊಡಲಾಗುತ್ತಿದೆ, ಅರ್ಹರು ಅರ್ಜಿ ಹಾಕಿ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತರ ತಾಲೂಕು ಅಧ್ಯಕ್ಷ ಸಮೀವುಲ್ಲಾ ಷರೀಫ್ ಮಾತನಾಡಿ, ವಕ್ಫ್ ಬೋರ್ಡ್ ವತಿಯಿಂದ ತಾಲೂಕಿನ ಎಲ್ಲ ಕಡೆ ಸುಮಾರು ರು.17 ಲಕ್ಷ ನೆರವು ನೀಡಲಾಗಿದೆ, ಸಹಕರಿಸಿದ ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಕೃತಜ್ಞತೆ ಎಂದು ತಿಳಿಸಿದರು.
ಮಾಜಿ ಪುರಸಭಾಧ್ಯಕ್ಷ ಎಚ್.ಯು.ಫಾರೂಕ್, ದರ್ಗಾ ಕಮಿಟಿ ಅಧ್ಯಕ್ಷ ಶಬೀರ್ ಆಹಮದ್, ಅಬ್ದುಲ್ ವಾಜಿದ್, ಶೇಕ್ ಹುಸೇನ್, ಕಮಿಟಿ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.