ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸ್ಥಿತಪ್ರಜ್ಞೆಯಿಂದ ಜೀವನದಲ್ಲಿ ಅಭಿವೃದ್ಧಿ

Mainashree
Updated On : 8 May 2014, 11:05 am

ನರಸಿಂಹರಾಜಪುರ: ಮಾನವನಿಗೆ ಶ್ರೀಮಂತಿಕೆ, ಬಡತನ, ನೋವು, ನಲಿವು ಎಲ್ಲಾ ಬಂದಾಗಲೂ ಮನಸ್ಸನ್ನು ಸಮಚಿತ್ತದಿಂದ ಇಟ್ಟುಕೊಂಡು ಸ್ವೀಕರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಇದರಿಂದ ಜೀವನದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಶ್ರೀ ತಿಳಿಸಿದರು.
ತಾಲೂಕಿನ ಕಣುವೆಯಲ್ಲಿ ಸೋಮವಾರ ಭಗವಾನ್ 1008 ಪಾರ್ಶ್ವನಾಥ ಸ್ವಾಮಿ ಜಿನ ಬಿಂಬದ ಪ್ರತಿಷ್ಠಾಪನಾ ಹಾಗೂ ಧಾಮ ಸಂಪ್ರೋಕ್ಷಣಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಾಚನ ನೀಡಿದರು.
ಕಣುವೆ ಗ್ರಾಮದಲ್ಲಿದ್ದ ಪಾರ್ಶ್ವನಾಥ ಸ್ವಾಮಿಯ ವಿಗ್ರಹವನ್ನು 1959ರಲ್ಲಿಯೇ ರಕ್ಷಣೆಯ ಉದ್ದೇಶದಿಂದ ಸಿಂಹನಗದ್ದೆ ಬಸ್ತಿಮಠದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಕಣುವೆ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ  ಪಾರ್ಶ್ವನಾಥ ಬಸದಿಗೆ ಗ್ರಾಮಸ್ಥರು ರು. 9 ಲಕ್ಷ ವೆಚ್ಚ ಮಾಡಿದ್ದಾರೆ. ಧರ್ಮಸ್ಥಳ ಟ್ರಸ್ಟ್ ರು. 16 ಲಕ್ಷ ವಿನಿಯೋಗಿಸಿದೆ.
ಮಲೆನಾಡು ಜೈನ ಮಲನ್ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮಾತನಾಡಿದರು. ಪಾರ್ಶ್ವನಾಥ ಬಸದಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಶಿಮೊಮಗ್ಗ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷ ಪದ್ಮರಾಜ್, ತೀರ್ಥಹಳ್ಳಿಯ ಡಾ. ಜೀವೇಂದ್ರಜೈನ್, ಜಯಪುರದ ಶಾಂತಕುಮಾರ್ ಜೈನ್, ಸಿಂಹನಗದ್ದೆ ಬಸ್ತಿಮಠದ ವ್ಯವಸ್ಥಾಪಕ ಪ್ರಭಾಕರ್ ಪ್ರೈ. ತೀರ್ಥಹಳ್ಳಿಯ ಧ.ಗ್ರಾ. ಯೋಜನೆಯ ನಿರ್ದೇಶಕ ಚಂದ್ರಶೇಖರ್, ಮುಖಂಡ ಪದ್ಮನಾಭ, ಶಶಿಫ್ರಭ ಶಾಂತಕುಮಾರ್ ಇದ್ದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರಮಸಿದವರನ್ನು ಹೊಂಬುಜ ಜೈನ ಮಠದ ಶ್ರೀಮದ್ ದೇವೇಂದ್ರಕೀರ್ತಿ ಭಟ್ಟಾರಕ ಶ್ರೀ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement