ಗುಜರಿ ಗುತ್ತಿಗೆಯಲ್ಲಿ ಕೋಟ್ಯಂತರ ರು. ಅವ್ಯಹಾರ
ಕ.ಪ್ರ.ವಾರ್ತೆ ್ಣ ಮೂಡಿಗೆರೆ ್ಣ ಮೇ 8
ತಾಲೂಕಿನ ಕಳಸ ಹೋಬಳಿಯ ಕುದುರೆಮುಖ ಮೈನಿಂಗ್ ಗುಜರಿ ಗುತ್ತಿಗೆಯಲ್ಲಿ ಕೋಟ್ಯಂತರ ರು. ಅವ್ಯಹಾರ ನಡೆಸಲಾಗಿದೆ ಎಂದು ಕಳಸ ಕರವೇ ಮಾಜಿ ಅಧ್ಯಕ್ಷ ರವಿ ರೈ, ಬ್ರಹ್ಮದೇವ ಮತ್ತು ಕಳಸ ಗ್ರಾಪಂ ಉಪಾಧ್ಯಕ್ಷ ಅನಿಲ್ ಗೇವಿನ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುದುರೆಮುಖ ಕಂಪೆನಿ ಮುಚ್ಚುಗಡೆಯಾದ ಮೇಲೆ ಇಲ್ಲಿರುವ ಒಂದು ಸಾವಿರ ಕೋಟಿ ರೂಗಳಿಗಿಂತಲೂ ಹೆಚ್ಚಿಗೆ ಬೆಲೆ ಬಾಳುವ ಮೈನಿಂಗ್ ಕಂಪೆನಿಯ ಯಂತ್ರಗಳನ್ನು ಕೇರಳ ಮೂಲದ ಅನ್ನಮ್ ಸ್ಟೀಲ್ಸ್ ಪ್ರೈ ಲಿಮಿಟೆಡ್‌ಗೆ 2 ವರ್ಷದ ಅವಧಿಗೆ ಕೇವಲ ರು. 231 ಕೋಟಿಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ಹೊರ ರಾಜ್ಯದ ಕೆಲಸಗಾರರು: ವ್ಯವಸ್ಥಿತ ಸಂಚು ರೂಪಿಸಿ ಟೆಂಟರ್ ಪ್ರಕ್ರಿಯೆಯಲ್ಲಿ ಅವ್ಯಹಾರ ನಡೆಸಿ, ಗುತ್ತಿಗೆ ನೀಡಲಾಗಿದೆ. ಅಲ್ಲದೆ ಇದರಲ್ಲಿ ಕೋಟ್ಯಾಂತರ ರು. ಅವ್ಯಹಾರ ನಡೆದಿದೆ. ಇದಕ್ಕೆ ಇಲ್ಲಿನ ಸ್ಥಳೀಯರನ್ನು ಬಿಟ್ಟು ಹೊರ ರಾಜ್ಯಗಳಿಂದ ಕೆಲಸಗಾರರನ್ನು ತಂದು ಕೆಲಸ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಕುದುರೆಮುಖ ಕಂಪೆನಿಗೋಸ್ಕರ ತಮ್ಮ ಮನೆ ಮಠ ಕಳೆದುಕೊಂಡ ಸಂಸೆ, ನೆಲ್ಲಿಬೀಡು, ಜಾಂಬ್ಲೆಯ ನಿರುದ್ಯೋಗಿ ಯುವಕರನ್ನು ನೇಮಿಸಿಕೊಳ್ಳಬೇಕು. ಅಲ್ಲದೆ ಕುದುರೆಮುಖ ಕಂಪೆನಿಯಲ್ಲಿ ದಿನಗೂಲಿ ನೌಕರರಾಗಿ ದುಡಿದು, ಇದೀಗ ಅತಂತ್ರರಾಗಿರುವ ಈ ದಿನಗೂಲಿ ನೌಕರರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಇಲ್ಲವಾದರೆ ಕಂಪೆನಿಯ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಇಲ್ಲಿನ ಬೃಹತ್ ಗಾತ್ರದ ಯಂತ್ರಗಳನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕಾದರೆ ರಸ್ತೆ ಹಾಳಾಗುತ್ತವೆ. ಇದಕ್ಕೆ ಗುತ್ತಿಗೆ ಪಡೆದುಕೊಂಡ ಕಂಪೆನಿಯು ಈ ರಸ್ತೆಗೆ ನೇರ ಜವಾಬ್ದಾರಾರುತ್ತಾರೆ ಎಂದು ಆರೋಪಿಸಿದ್ದಾರೆ.
ವಿದ್ಯಾಲಯ: ಕುದುರೆಮುಖ ಕಂಪೆನಿಯು ವರ್ಷಕ್ಕೆ ಒಂದು ಕೋಟಿ ರೂ. ನೀಡಿ ಕೇಂದ್ರೀಯ ವಿದ್ಯಾಲಯವನ್ನು 36 ವರ್ಷದಿಂದ ನಡೆಸಿಕೊಂಡು ಹೋಗುತ್ತಿತ್ತು. ಆದರೆ ಇದೀಗ ಈ ವಿದ್ಯಾಲಯವನ್ನು ನಡೆಸಿಕೊಂಡು ಹೋಗಲು ಕಂಪೆನಿ ಕೊಡುತ್ತಿರುವ ಅನುದಾನವನ್ನು ನಿಲ್ಲಿಸಿ ಇಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ನೂರಾರು ಮಕ್ಕಳ ಊವಿಷತ್ತಿನ ಮೇಲೆ ಕಂಪೆನಿಯು ಚೆಲ್ಲಾಟವಾಡಿತು ಎಂದು ಆರೋಪಿಸಿದರು.
ಈ ವಿದ್ಯಾಲಯದಲ್ಲಿ ಕಳೆದ 1 ತಿಂಗಳಿನಿಂದ ನಡೆದ ಗೊಂದಲಗಳಿಗೆ ಕಂಪೆನಿಯೇ ನೇರ ಹೊಣೆಯಾಗಿದೆ. ರು. 1560 ಕೋಟಿ ಲಾಭದಲ್ಲಿರುವ ಕುದುರೆಮುಖ ಕಂಪೆನಿ ವರ್ಷಕ್ಕೆ ಕೇವಲ ಒಂದು ಕೋಟಿ ರು. ಕೊಟ್ಟು ಈ ವಿದ್ಯಾಲಯ ನಡೆಸಲು ಹಿಂದೇಟು ಹಾಕಿರುವುದು ಸರಿಯಲ್ಲ ಎಂದು ಆರೋಪಿಸಿದರು.